ಪಿರಿಯಾಪಟ್ಟಣ: ಶೋಷಿತ ವರ್ಗದವರು ಶಿಕ್ಷಣ ಮತ್ತು ಸಂಘಟನೆಯಿಂದ ಮಾತ್ರ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಸಾಧ್ಯ ಎಂದು ಪಟ್ಟಣದ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ನಂಜುಂಡಸ್ವಾಮಿ ತಿಳಿಸಿದರು.

ವಾಲ್ಮೀಕಿ ನಾಯಕ ನೌಕರರ ತಾಲ್ಲೂಕು ಸಂಘದಿಂದ ಪಟ್ಟಣದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಜಕೀಯ ಮತ್ತು ಸಾಮಾಜಿಕ ಶೈಕ್ಷಣಿಕ ಪ್ರಾತಿನಿಧ್ಯಕ್ಕಾಗಿ ಉತ್ತಮ ಶಿಕ್ಷಣವನ್ನು ಪಡೆಯಲು ಹೋರಾಡುವ ಅಗತ್ಯವಿದೆ ಎಂದು ತಿಳಿಸಿದರು.

ರಾಜ್ಯ ಪರಿಶಿಷ್ಟ ಪಂಗಡಗಳ ನೌಕರರ ಸಂಘದ ಅಧ್ಯಕ್ಷ ಜಗದೀಶ್ ಮಾತನಾಡಿ, ‘ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಸಂಘಟಿತರಾಗಬೇಕು ಎಂದರು. ತಾಲ್ಲೂಕು ಘಟಕದ ಅಧ್ಯಕ್ಷ ಟಿ. ಎಸ್. ಚೆಲುವರಾಯಿ ಮಾತನಾಡಿ, ತಾಲ್ಲೂಕು ಸಂಘದಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ನಗದು ಬಹುಮಾನ ನೀಡುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು. ಸಮುದಾಯದ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಪುಟ್ಟಣ್ಣ, ರಾಮಚಂದ್ರ, ಹರೀಶ್, ರವಿ ನಾಯಕ, ಎಚ್.ವಿ.ಶಿವಣ್ಣ, ಎಚ್. ಎಸ್. ಕೃಷ್ಣಕುಮಾರ್, ಮಂಜಪ್ಪ, ಎಂ.ರುದ್ರಪ್ಪ, ನಟರಾಜನಾಯಕ, ರಾಜಕುಮಾರ್, ಎಸ್. ವೆಂಕಟೇಶ್, ಪಾಪಣ್ಣ ನಾಯಕ, ಗೋವಿಂದ ನಾಯಕ , ವಿ.ಮಹೇಶ್, ಎಂ.ಮಹಾದೇವ, ಎಂ. ಸಿ.ವೆಂಕಟೇಶ್, ಪದ್ಮಿನಿ, ಮಹಾದೇವ, ಲೋಕೇಶ್, ರೂಪಾ, ಭವಾನಿ, ಟಿ.ಕೆ.ಸಚಿನ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.