ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಾಳೆ ರಕ್ಷಾ ಬಂಧನ; ಅಕ್ಕ– ತಂಗಿಯರ ರಾಖಿ ಖರೀದಿ ಸಂಭ್ರಮ

Published : 18 ಆಗಸ್ಟ್ 2024, 5:49 IST
Last Updated : 18 ಆಗಸ್ಟ್ 2024, 5:49 IST
ಫಾಲೋ ಮಾಡಿ
Comments

ಮೈಸೂರು: ಫ್ಯಾನ್ಸಿ ರಾಖಿ, ಪೆಂಡೆಂಟ್‌ ರಾಖಿ, ಸ್ಟೋನ್‌ ರಾಖಿ, ಕಿಡ್‌ ರಾಖಿ, ಜಾರ್ದೋಝಿ ರಾಖಿ, ಎಡಿ, ಲುಂಬಾ ಹಾಗೂ ದೋರಿ ಹೆಸರಿನ ವಿವಿಧ ರಾಖಿಗಳು ನಗರದ ಹೆಣ್ಣುಮಕ್ಕಳನ್ನು ಆಕರ್ಷಿಸುತ್ತಿದೆ.

ಅಣ್ಣ, ತಮ್ಮಂದಿರ ಪ್ರೇಮದೊಂದಿಗೆ, ರಕ್ಷಣೆಯ ಬಂಧನವನ್ನು ಕೋರುವ ರಕ್ಷಾ ಬಂಧನ ಹಬ್ಬಕ್ಕೆ ಮಾರುಕಟ್ಟೆಯೂ ಸಿದ್ಧವಾಗಿದ್ದು, ಹಲವು ಬಗೆಯ ರಾಖಿಗಳು ಅಂಗಡಿ ಮುಂಗಟ್ಟನ್ನು ಸಿಂಗರಿಸಿವೆ. ಚಾವಣಿಯಿಂದ ಇಳಿಬಿದ್ದ ಹಗ್ಗಗಳಲ್ಲಿ ಗೊಂಚಲಿನಂತೆ ನೇತಾಡುತ್ತಾ ಕಣ್ಮನ ಸೆಳೆಯುತ್ತಿವೆ.

‘ಬನ್ನಿ ಅಕ್ಕ, ಲಬಾರ್, ಬಟನ್ ರಾಖಿ, ಥ್ರೆಡ್ ರಾಖಿ, ಪೂಜಾ ರಾಖಿ, ಪ್ಲವರ್ ರಾಖಿ, ಮೋರ್ ರಾಖಿ... ಯಾವುದೂ ಬೇಕು ಕೇಳಿ, ರೇಟ್‌ ನೋಡ್ಬೇಡಿ, ಜೊತೆ ಹುಟ್ಟಿದವರಿಗಾಗಿ ಒಂದ್ಸಲ ಬರೋ ಹಬ್ಬ ಅಲ್ವಾ..’ ಎಂದು ಗಿರಾಕಿಗಳನ್ನು ಕರೆಯುವ ಅಂಗಡಿಯವರ ಮಾತುಗಳೇ ಹಬ್ಬಕ್ಕೆ ಇನ್ನಷ್ಟು ಮೆರುಗು ನೀಡುತ್ತವೆ.

ನಗರದ ಶಿವರಾಂ ಪೇಟೆ, ಮನ್ನಾರ್ಸ್‌ ಮಾರ್ಕೆಟ್‌, ಚಿಕ್ಕ ಗಡಿಯಾರ ಮುಂತಾದ ಸ್ಥಳದಲ್ಲಿನ ಅಂಗಡಿಗಳು ವಿವಿಧ ರಾಖಿಗಳಿಂದ ತುಂಬಿವೆ. ಗುರುವಾರದಿಂದಲೇ ಖರೀದಿಯೂ ಏರುಗತಿಯಲ್ಲಿ ಸಾಗುತ್ತಿದ್ದು, ಮಹಿಳೆಯರು, ಕಾಲೇಜು ವಿದ್ಯಾರ್ಥಿನಿಯರು ಗುಂಪು ಗುಂಪಾಗಿ ಬಂದು ಖರೀದಿಯಲ್ಲಿ ತೊಡಗುತ್ತಿದ್ಧಾರೆ.

‘ನಮ್ಮ ಅಂಗಡಿಯಲ್ಲಿ ₹5ರಿಂದ ₹ 900 ದರದವರೆಗಿನ ರಾಖಿಗಳು ಲಭ್ಯವಿದೆ. ಮಾರುಕಟ್ಟೆಯಲ್ಲಿ ಈ ಬಾರಿ ಹೆಚ್ಚಿನ ಸರಕು ಬಂದಿದ್ದು, ಒಳ್ಳೆ ಡಿಸೈನ್‌ಗಳು ಇವೆ. ಬೆಂಗಳೂರು, ಬಾಂಬೆ, ಡೆಲ್ಲಿ, ಕೋಲ್ಕತ್ತದಿಂದಲೂ ರಾಖಿಗಳನ್ನು ತರಿಸಲಾಗಿದೆ’ ಎಂದು ಶಿವರಾಂಪೇಟೆಯ ಮಾರುತಿ ಭಂಡಾರ್ ಸ್ಟೋರ್ ಮಾಲೀಕ ವಿಜಯ ಹೇಳಿದರು.

ಅಕ್ಷತಾ
ಅಕ್ಷತಾ

ಕಾರ್ಟೂನ್‌ ಶೋಗಳ ಪಾತ್ರಗಳು, ವಾಟ್ಸ್‌ಆ್ಯಪ್‌ ಇಮೋಜಿಗಳೂ ರಾಖಿ ವಿನ್ಯಾಸಗಳಾಗಿ ರೂಪುಗೊಂಡು ಮಾರುಕಟ್ಟೆಗೆ ಬಂದಿವೆ. ಸ್ಪೈಡರ್‌ ಮ್ಯಾನ್‌, ಬ್ಯಾಟ್‌ ಮ್ಯಾನ್‌, ಛೋಟಾ ಭೀಮ್‌, ಡೊರೆಮಾನ್‌ ಚಿತ್ರದ ರಾಖಿ ಮಕ್ಕಳ ಮನಸೆಳೆಯುತ್ತಿದೆ. ಒಂದಷ್ಟು ಕಾಲ ಕೈಯಲ್ಲಿ ಇರಬೇಕು ಎನ್ನುವವರು ಥ್ರೆಡ್, ಪೆಂಡೆಂಡ್‌ ರಾಖಿಗಳತ್ತಲೂ ಗಮನಹರಿಸುತ್ತಿದ್ದಾರೆ. ಅಣ್ಣ ತಂಗಿ, ಅಕ್ಕ ತಮ್ಮನ ಬಾಂಧವ್ಯಕ್ಕೆ ಹೊಸ ಸ್ಪರ್ಷ ನೀಡಲು ರಾಖಿಗಳೂ ಸಿದ್ಧವಾಗಿವೆ.

ಪ್ರತಿವರ್ಷವೂ ರಾಖಿ ಖರೀದಿಸುತ್ತೇನೆ. ಅಣ್ಣ ತಮ್ಮಂದಿರಿಗೆ ನಮ್ಮ ಪ್ರೀತಿ ತೋರುವುದು ಒಂದು ಭಾಗವಾದರೇ ರಾಖಿಗಳ ವಿನ್ಯಾಸಗಳನ್ನೂ ನೋಡುವುದೇ ಒಂದು ಸಂಭ್ರಮ
ಅಕ್ಷತಾ ವಿದ್ಯಾರಣ್ಯಪುರಂ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT