ಸರಗೂರು: ‘ಮೀಸಲಾತಿ ವಿಚಾರದಲ್ಲಿ ಮಠಾಧೀಶರು ಸಮಾಜದಲ್ಲಿ ತುಳಿತಕ್ಕೆ ಒಳಗಾದ, ಬಡತನದಲ್ಲಿರುವ ಜಾತಿ ಪರ ಇರಬೇಕೆ? ಹೊರತು ತಮ್ಮ ಜಾತಿ- ವರ್ಗವನ್ನು ವಹಿಸಿಕೊಂಡು ಮುಖ್ಯಮಂತ್ರಿಗಳಿಗೆ ಒತ್ತಡ ತರುವಂಥ ಕೆಲಸ ಮಾಡಬಾರದು’ ಎಂದು ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ಮನವಿ ಮಾಡಿದರು.

ಪಟ್ಟಣದಲ್ಲಿ ಶ್ರೀ ಮಹಾಗಣಪತಿ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಸೋಮವಾರ ಭಾಗವಹಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ‘ಮುಂದುವರಿದ ಪ್ರತಿ ಜನಾಂಗದವರೂ ತಮಗೂ ಅಭಿವೃದ್ಧಿ ನಿಗಮ ಕೊಡಿ ಎಂದು ಕೇಳುತ್ತಿದ್ದಾರೆ. ಹೀಗಾದರೆ ಹಿಂದುಳಿದ ಸಣ್ಣ-ಪುಟ್ಟ ಜಾತಿಗಳ ಗತಿ ಏನು’ ಎಂದು ಪ್ರಶ್ನಿಸಿದರು.

‘ಕೆಲ ಜನಾಂಗದವರಿಗೆ ಮಾತನಾಡುವ ಶಕ್ತಿ ಇಲ್ಲ. ಅವರಲ್ಲಿ ಯಾರೂ ಶಾಸಕರಿಲ್ಲ. ಮಂತ್ರಿಗಳಾಗಿದ್ದವರು ಅವರ ಜಾತಿ ಪರ ಬೀದಿಗಳಿದರೆ ಉಳಿದವರ ಪಾಡೇನು? ಸಿದ್ದಗಂಗಾ ಮಠ, ಸುತ್ತೂರು ಮಠದ ಸ್ವಾಮೀಜಿಗಳು ಸಮಾಜದಲ್ಲಿ ತುಳಿತಕ್ಕೆ ಒಳಗಾದವರಿಗೆ ಮೀಸಲಾತಿಯಲ್ಲಿ ಮೊದಲನೇ ಆದ್ಯತೆ ನೀಡಲಿ ಎಂದಿದ್ದಾರೆ. ಇದರ ಪರವಾಗಿ ಇರುವಂಥವನು ನಾನು. ಹೀಗಾಗಿ ರಾಜ್ಯದ ವಿವಿಧ ಮಠಾಧೀಶರು ತಮ್ಮ ವರ್ಗವನ್ನು ವಹಿಸಿಕೊಂಡು ಮೀಸಲಾತಿಗಾಗಿ ಮುಖ್ಯಮಂತ್ರಿಗಳಿಗೆ ಒತ್ತಡ ತರಬಾರದು. ಮೀಸಲಾತಿ ಜಾರಿ ಅವರ ಕೈಲಿಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.