ರೋಟರಿ ವಲಯ 7ರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಪ್ರಹ್ಲಾದ್ ಮಾತನಾಡಿ, ‘ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸಲು ರೋಟರ್‍ಯಾಕ್ಟ್ ಸಹಾಯ ಮಾಡಲಿದೆ. ಇಲ್ಲಿನ ಭಾಗವಹಿಸುವಿಕೆಯು ಭವಿಷ್ಯದಲ್ಲಿ ಸಹಕಾರಿಯಾಗಲಿದ್ದು, ಉದ್ಯೋಗ ವಲಯದಲ್ಲಿ ಸಕ್ರಿಯರಾಗಿರಲು ಬೇಕಾದ ಗುಣಗಳ ಬಗ್ಗೆ ತಿಳಿಸಿಕೊಡುತ್ತದೆ’ ಎಂದು ತಿಳಿಸಿದರು.