ಮಹಾನಗರಪಾಲಿಕೆಯಿಂದ ಗ್ರಂಥಾಲಯ ಸೆಸ್ ಬಾಕಿ ಇರುವ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು
ಶೇಖ್ ತನ್ವೀರ್ ಆಸೀಫ್ ಆಯುಕ್ತ ಮಹಾನಗರಪಾಲಿಕೆ ಮೈಸೂರು
ನಮ್ಮ ಆರ್ಥಿಕ ಸಂಪನ್ಮೂಲದಲ್ಲಿ ಶೇ 50ರಷ್ಟು ಹಣ ವೇತನಕ್ಕೇ ಹೋಗುತ್ತಿದೆ. ಗ್ರಂಥಾಲಯ ಸೆಸ್ ಬಾಕಿ ಸಂದಾಯವಾದರೆ ಬಹಳಷ್ಟು ಅನುಕೂಲವಾಗುತ್ತದೆ
ಬಿ.ಮಂಜುನಾಥ್ ಸಾರ್ವಜನಿಕ ಗ್ರಂಥಾಲಯಗಳ ಉಪ ನಿರ್ದೇಶಕ
ಬಡವಾಗುತ್ತಿರುವ ಓದುಗರು!
ಸಾರ್ವಜನಿಕ ಗ್ರಂಥಾಲಯ ಕಾಯ್ದೆ–1965 ನಿಯಮ 30ರ ಪ್ರಕಾರ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ಸಂಗ್ರಹಿಸುವ ಆಸ್ತಿ ತೆರಿಗೆಯ ಶೇ 6ರಷ್ಟನ್ನು ಗ್ರಂಥಾಲಯಗಳ ಅಭಿವೃದ್ಧಿಗೆ ನೀಡಬೇಕು. ಇದು ಸಮರ್ಪಕವಾಗಿ ನಡೆಯದ ಕಾರಣ ಬಾಕಿ ಉಳಿದುಕೊಂಡಿದೆ. ಇದರಿಂದಾಗಿ ‘ಜ್ಞಾನದೇಗುಲ’ಗಳಲ್ಲಿ ಹೆಚ್ಚಿನ ಸೌಲಭ್ಯಗಳು ದೊರೆಯದ ಕಾರಣ ಓದುಗರು ಬಡವಾಗುತ್ತಿದ್ದಾರೆ!