ಮೈಸೂರು: ‘ವಿದ್ಯಾರಣ್ಯಪುರಂನ ಹರಿದಾಸ ಸಂಗೀತ ಸಾಹಿತೋತ್ಸವ ಸಮಿತಿಯಿಂದ ಫೆ. 16ರಿಂದ 23ರವರೆಗೆ ನಗರದ ಕೃಷ್ಣಮೂರ್ತಿಪುರಂನ ಶಾರದಾವಿಲಾಸ ಶತಮಾನೋತ್ಸವ ಭವನದಲ್ಲಿ ‘ರುಗ್ಮಿಣೀಶ ವಿಜಯ ಸಪ್ತಾಹ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಸಂಸ್ಥಾಪಕ ರವಿಕುಮಾರ್ ತಿಳಿಸಿದರು.

ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ನಿತ್ಯ ಸಂಜೆ 5ರಿಂದ ರಾತ್ರಿ 8.30ರವರೆಗೆ ಕಾರ್ಯಕ್ರಮ ನಡೆಯಲಿದೆ’ ಎಂದು ಮಾಹಿತಿ ನೀಡಿದರು.

‘16ರಂದು ಸೋಸಲೆ ವ್ಯಾಸರಾಜ ಮಠದ ವಿದ್ಯಾಶ್ರೀಶತೀರ್ಥ ಶ್ರೀಪಾದಂಗಳು ಉದ್ಘಾಟಿಸುವರು. ಯುವ ವಿದ್ವಾಂಸರಿಂದ ಯತಿವರೇಣ್ಯರ, ದಾಸವರೇಣ್ಯರ ಕೀರ್ತನೆಗಳ ವಿಶ್ಲೇಷಣೆ ನಡೆಯಲಿದೆ. 17ರಂದು ವ್ಯಾಸರಾಜ ಮಠದ ದಿವಾನ ಬ್ರಹ್ಮಣ್ಯಾಚಾರ್ಯ ಪ್ರವಚನ ನೀಡುವರು. ಹರಿಭಜನೆ ನಡೆಯಲಿದೆ’ ಎಂದು ಹೇಳಿದರು.

‘17ರಂದು ಅನಂತ ಕುಲಕರ್ಣಿ, 18ರಂದು ಪ್ರಜ್ಞಾ ರಾವ್, 19ಕ್ಕೆ ರಮೇಶ್ ಕುಲಕರ್ಣಿ, 20ರಂದು ದಿವ್ಯಾ ಗಿರೀಧರ್, 21ರಂದು ಅನಂದರಾಜ್ ಮಿಸ್ತ್ರಿ, 22ರಂದು ಸುಪ್ರಿಯಾ ಪ್ರವೀಣ್, 23ರಂದು ರಾಚಯೂರು ಶೇಷಗಿರಿದಾಸ್ ಅವರಿಂದ ಹರಿ ಭಜನೆ ನಡೆಯಲಿದೆ. ಫೆ. 16ರಂದು ಪ್ರಣವಾಚಾರ್ಯ, ಸುಘೋಷಾಚಾರ್ಯ, ಎಚ್.ಎನ್. ಸೌಮಿತ್ರಿ, ಶ್ರೀಶ ಅಯಾಚಿತ, ಎನ್. ಧನ್ಯಾ, ಎಂ.ಎಸ್. ಕೀರ್ತನಾ, ಎಸ್. ಹಂಸಿಣಿ, ನಯನಾ ನಾಗರಾಜ್ ಗಾಯನ ಪ್ರಸ್ತುತಪಡಿಸುವರು’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.