ಮೈಸೂರು: ಇಲ್ಲಿನ ವಿಮಾನ ನಿಲ್ದಾಣದಲ್ಲಿ ಮುಡಾ ಅಧ್ಯಕ್ಷ ಕೆ.ಮರೀಗೌಡ ಅವರಿಗೆ ಗುರುವಾರ ಕಾಂಗ್ರೆಸ್ ಕಾರ್ಯಕರ್ತರೇ ಘೇರಾವ್ ಹಾಕಿದರು.
ಸಿದ್ದರಾಮಯ್ಯ ಅವರ ಆಪ್ತ ಮರೀಗೌಡ ಅವರಿಗೆ ಘೇರಾವ್ ಹಾಕಿ ವಾಪಸ್ ಕಳುಹಿಸಿದರು.
ಸಿದ್ದರಾಮಯ್ಯ ಅವರಿಗೆ ಈಗ ಎದುರಾಗಿರುವ ಸ್ಥಿತಿಗೆ ನೀನೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಸಮಜಾಯಿಷಿ ನೀಡಲು ಮುಂದಾದ ಮರೀಗೌಡ ಅವರಿಗೆ, ನಿನ್ನ ಭಾಷಣ ಬೇಡ, ಹೊರಡು ಎಂದು ಬಲವಂತವಾಗಿ ಕಾರು ಹತ್ತಿಸಿ, ಕಾರನ್ನು ಬಡಿಯುತ್ತಾ ವಾಪಸ್ ಕಳುಹಿಸಿದರು.