ಮೈಸೂರು: ‘ನಮ್ಮ ಸರ್ಕಾರ ಐದು ವರ್ಷವೂ ಗಟ್ಟಿಯಾಗಿರುತ್ತದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಕುರ್ಚಿಯ ಮೇಲೆ ಗಟ್ಟಿಯಾಗಿ ಕುಳಿತಿದ್ದಾರೆ; ಮುಂದೆಯೂ ಕುಳಿತಿರುತ್ತಾರೆ. ಕುರ್ಚಿ ಅಲುಗಾಡುತ್ತಿದೆ, ಖಾಲಿಯಾಗುತ್ತದೆ ಎಂಬ ಯಾವ ಚರ್ಚೆಯೂ ಬೇಡ’ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.

ಇಲ್ಲಿ ಬುಧವಾರ ಪತ್ರಕರ್ತರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ‘ಮುಖ್ಯಮಂತ್ರಿ ಕುರ್ಚಿಗಾಗಿ ರೇಸೇ ನಡೆಯುತ್ತಿಲ್ಲ. ಓಟವೇ ಇಲ್ಲ ಎಂದ ಮೇಲೆ ಆಕಾಂಕ್ಷಿಗಳ ಪ್ರಶ್ನೆಯೇ ಬರುವುದಿಲ್ಲ. ರೇಸ್ ಮುಗಿದಿದೆ; ನಾವು ಗುರಿ ತಲುಪಿದ್ದೇವೆ. ಸರ್ಕಾರ ನಡೆಸುತ್ತಿದ್ದೇವೆ. 2028ಕ್ಕೂ ನಮ್ಮದೇ ಸರ್ಕಾರ ಬರುತ್ತದೆ. ಆಗ ಬೇಕಾದರೆ ರೇಸ್ ಬಗ್ಗೆ ಮಾತನಾಡೋಣ. ಸದ್ಯಕ್ಕೆ ಅದ್ಯಾವ ಪ್ರಶ್ನೆಗಳೂ ಇಲ್ಲ’ ಎಂದರು.

‘ವಿರೋಧಪಕ್ಷದವರಿಗೆ ಸಂವಿಧಾನದ ಪ್ರಕಾರ ಕೆಲಸ ಮಾಡಲು ಯಾವ ವಿಚಾರವೂ ಇಲ್ಲ. ಈ ಕಾರಣ ಇಲ್ಲದ ವಿಚಾರವನ್ನು ಇದೆ ಎನ್ನುವ ರೀತಿ ಮಾತನಾಡುತ್ತಿದ್ದಾರೆ. ವಿರೋಧಪಕ್ಷವಾಗಿ ಜವಾಬ್ದಾರಿ ನಿರ್ವಹಿಸುವಲ್ಲಿ ಸೋತಿವೆ ಅಥವಾ ಆ ಸ್ಥಾನಕ್ಕೆ ಬೇಕಾದ ಪಕ್ವತೆ ಬರುತ್ತಿಲ್ಲವಷ್ಟೆ’ ಎಂದು ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.