ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಂಜನಗೂಡು | ಶ್ರೀಕಂಠೇಶ್ವರ ಸ್ವಾಮಿ ದೇವಾಲಯ: ₹1.69 ಕೋಟಿ ಆದಾಯ

Published 25 ಜೂನ್ 2024, 16:06 IST
Last Updated 25 ಜೂನ್ 2024, 16:06 IST
ಅಕ್ಷರ ಗಾತ್ರ

ನಂಜನಗೂಡು: ನಗರದ ಪುರಾಣ ಪ್ರಸಿದ್ದ ಶ್ರೀಕಂಠೇಶ್ವರ ದೇವಾಲಯದಲ್ಲಿ ಮಂಗಳವಾರ ಹುಂಡಿ ಎಣಿಕೆ ಕಾರ್ಯ ನಡೆಯಿತು.

ಒಟ್ಟು 35 ಹುಂಡಿಗಳಿಂದ ದೇವಾಲಯಕ್ಕೆ ₹1,69,69,867 ನಗದು, 134 ಗ್ರಾಂ ಚಿನ್ನ, 2.350 ಕೆ.ಜಿ ಬೆಳ್ಳಿ ಹಾಗೂ 23 ವಿದೇಶಿ ಕರೆನ್ಸಿಗಳು ಲಭ್ಯವಾಗಿವೆ.

ದೇವಾಲಯದ ದಾಸೋಹ ಭವನದಲ್ಲಿ ನಡೆದ ಎಣಿಕೆಯಲ್ಲಿ ನೂರಕ್ಕೂ ಹೆಚ್ಚು ಸ್ವಸಹಾಯ ಸಂಘದ ಮಹಿಳಾ ಸದಸ್ಯರು, ಬ್ಯಾಂಕ್‌ ಅಫ್‌ ಬರೋಡ ಸಿಬ್ಬಂದಿ ಹಾಗೂ ದೇವಾಲಯದ ಸಿಬ್ಬಂದಿ ಭಾಗಿಯಾದರು

ದೇವಾಲಯದ ಇಒ ಜಗದೀಶ್‌ ಕುಮಾರ್‌, ಮುಜರಾಯಿ ಇಲಾಖೆ ತಹಶೀಲ್ದಾರ್‌ ವಿದ್ಯುಲ್ಲತಾ, ಎಇಒ ಸತೀಶ್‌, ಲೆಕ್ಕಾಧಿಕಾರಿ ಗುರುಮಲ್ಲಯ್ಯ, ಬ್ಯಾಕ್‌ ಅಫ್‌ ಬರೋಡ ವ್ಯವಸ್ಥಾಪಕ ಟಿ.ಕೆ.ನಾಯಕ್‌ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT