ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು | ‌ಚಾಕುವಿನಿಂದ ಇರಿತ: ಯುವಕ ಸಾವು

Published 29 ಏಪ್ರಿಲ್ 2024, 14:21 IST
Last Updated 29 ಏಪ್ರಿಲ್ 2024, 14:21 IST
ಅಕ್ಷರ ಗಾತ್ರ

ಮೈಸೂರು: ಅಗ್ರಹಾರದ ನೂರೊಂದು ಗಣಪತಿ ದೇವಾಲಯದ ಸಮೀಪ ಭಾನುವಾರ ದುಷ್ಕರ್ಮಿಗಳ ತಂಡದಿಂದ ಚಾಕುವಿನಿಂದ ಇರಿತಕ್ಕೊಳಗಾದ ಕೆ.ಆರ್‌.ಮೊಹಲ್ಲಾದ ಮೇದರಕೇರಿಯ ಕುಮಾರ್‌ (24) ಸೋಮವಾರ ಮೃತಪಟ್ಟಿದ್ದಾರೆ.

ಮೃತಪಟ್ಟ ವ್ಯಕ್ತಿ ಹಾಗೂ ಆರೋಪಿಗಳು ರಿಕ್ಷಾ ಚಾಲಕರು. ಎಂಟು ತಿಂಗಳ ಹಿಂದೆಯೇ ಇವರ ನಡುವೆ ಜಗಳವಾಗಿತ್ತು. ಅದೇ ದ್ವೇಷದ ಕಾರಣ ಹತ್ಯೆ ನಡೆದಿದೆ ಎನ್ನಲಾಗಿದೆ.‌

ಕುಮಾರ್‌ ಭಾನುವಾರ ಮಧ್ಯಾಹ್ನ ನೂರೊಂದು ಗಣಪತಿ ದೇವಾಲಯದ ಬಳಿಗೆ ಆಟೊ ಚಲಾಯಿಸಿಕೊಂಡು ಬಂದಿದ್ದರು. ಈ ವೇಳೆ ಎರಡು ಬೈಕ್‌ಗಳಲ್ಲಿ ಬಂದ ನಾಲ್ಕು ಮಂದಿ ಚಾಕುವಿನಿಂದ ಇರಿದು ಪರಾರಿಯಾಗಿದ್ದರು. ಗಾಯಗೊಂಡ ಕುಮಾರ್‌ ಅವರನ್ನು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಕೃಷ್ಣರಾಜ ಠಾಣೆಯ ಪೊಲೀಸರು ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡು ವಿದ್ಯಾರಣ್ಯಪುರಂ ನಿವಾಸಿಗಳಾದ ನಾಲ್ವರನ್ನು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT