ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿಗಾಗಿ ವಿದ್ಯಾರ್ಥಿಗಳ ಪ್ರತಿಭಟನೆ

Published 9 ಮಾರ್ಚ್ 2024, 5:27 IST
Last Updated 9 ಮಾರ್ಚ್ 2024, 5:27 IST
ಅಕ್ಷರ ಗಾತ್ರ

ಮೈಸೂರು: ಕುಡಿಯುವ ನೀರು ಹಾಗೂ ಮೂಲಸೌಕರ್ಯಕ್ಕೆ ಆಗ್ರಹಿಸಿ ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸ್ನಾತಕೋತ್ತರ ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಗುರುವಾರ ಪ್ರತಿಭಟನೆ ನಡೆಸಿದರು. 

ಸಂಸ್ಥೆಯ ಎದುರು ಜಮಾಯಿಸಿದ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

ಸಂಶೋಧನಾ ವಿದ್ಯಾರ್ಥಿ ಕಲ್ಲಹಳ್ಳಿ ಕುಮಾರ್ ಮಾತನಾಡಿ, ‘ಕುಡಿಯುವ ನೀರಿಗಾಗಿ ವಿಭಾಗದ ಮುಖ್ಯಸ್ಥರನ್ನು ಕೇಳಿದರೆ ನಲ್ಲಿ ನೀರು ಕುಡಿಯಿರಿ ಎಂದಿದ್ದಾರೆ’ ಎಂದು ದೂರಿದರು.

‘ಸಮಸ್ಯೆ ಬಗೆಹರಿಯುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ. ವಿಭಾಗದ ಆಡಳಿತ ವರ್ಗದ ಅಧಿಕಾರಿಗಳಿಂದ ಸಂಶೋಧನಾ‌ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ. ಅಕಾಡೆಮಿಕ್ ಕೆಲಸಗಳಿಗೆ ತೀವ್ರ ತೊಂದರೆ ಆಗುತ್ತಿದೆ’ ಎಂದರು.

ಪ್ರತಿಭಟನೆಯಲ್ಲಿ  ವಿದ್ಯಾರ್ಥಿಗಳಾದ ರಾಜೇಶ್ ಚಾಕನಹಳ್ಳಿ, ಎಂ.ಲಿಂಗರಾಜು, ವರಹಳ್ಳಿ ಆನಂದ, ಸಂಜಯ್ ಕುಮಾರ್, ಗೌತಮ್, ಅವಿನಾಶ್, ಸಿದ್ದನಾಗಪ್ಪ, ಸುರೇಶ್, ಅಭಿಷೇಕ್, ರಂಗಸ್ವಾಮಿ, ದಿಲೀಪ್, ರಾಜೇಶ್ ಶಿವ, ಪ್ರತಾಪ್, ನಟರಾಜ್ ಬೊಮ್ಮಲಾಪುರ, ಹನುಮಂತಪ್ಪ, ಸೋಮಶೇಖರ್, ಅರುಣ್, ನಟರಾಜ್, ಮಲ್ಲೇಶ್, ದೀಪಿಕಾ, ದಿವ್ಯಶ್ರೀ, ಎಸ್. ಧನಲಕ್ಷ್ಮೀ, ಪೂಜಿತಾ, ರಂಜಿತಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT