ಮೈಸೂರು: ಸಾಹಿತಿ ಎಸ್.ಎಲ್.ಭೈರಪ್ಪ ಅವರು ಇಲ್ಲಿನ ತಮ್ಮ ನಿವಾಸದಲ್ಲಿ ಲೇಖಕ ಎಸ್.ಉಮೇಶ್ ಅವರ ಲಾಲ್‌ಬಹದ್ದೂರ್‌ಶಾಸ್ತ್ರಿ ಬದುಕಿನ ಕುರಿತಾದ ‘ತಾಷ್ಕಂಟ್ ಡೈರಿ’ ಪುಸ್ತಕವನ್ನು ಶುಕ್ರವಾರ ಬಿಡುಗಡೆ ಮಾಡಿದರು.

ನಂತರ ಮಾತನಾಡಿದ ಅವರು, ‘ಲಾಲ್‌ಬಹದ್ದೂರ್‌ಶಾಸ್ತ್ರಿ ಬದುಕಿದ್ದರೆ ಭಾರತದ ಇತಿಹಾಸದ ಸ್ವರೂಪವೇ ಬದಲಾಗುತ್ತಿತ್ತು’ ಎಂದು ಹೇಳಿದರು.

ಭಾರತಕ್ಕೆ ಕ್ಷೀರಕ್ರಾಂತಿ ಅಗತ್ಯ ಎಂದು ಅರಿತು, ಅವರು ಅದರ ಜವಾಬ್ದಾರಿಯನ್ನು ಕುರಿಯನ್ ಅವರಿಗೆ ವಹಿಸಿದರು. ಅವರ ಸರಳತೆ ಮೆಚ್ಚುವಂತದ್ದಾಗಿತ್ತು ಎಂದು ತಿಳಿಸಿದರು.

ಬನಾರಸ್‌ನಲ್ಲಿ ವಾಸವಿದ್ದಾಗ ತಾವು ಶಾಸ್ತ್ರಿ ಅವರ ಮನೆಗೆ ಭೇಟಿ ಕೊಟ್ಟ ಪ್ರಸಂಗಗಳನ್ನು ನೆನಪು ಮಾಡಿಕೊಂಡರು.

ಧಾತ್ರಿ ಪ್ರಕಾಶನದ ಮುಖ್ಯಸ್ಥರಾದ ಬೃಂದಾ ಉಮೇಶ್ ಮಾತನಾಡಿ, ‘ಮೊದಲ ಮುದ್ರಣದ ಬಹುತೇಕ ಎಲ್ಲ ಪ್ರತಿಗಳನ್ನು ಓದುಗರು ಕಾಯ್ದಿರಿಸಿದ್ದಾರೆ. ಈಗ ಅದನ್ನು ಅವರಿಗೆ ತಲುಪಿಸುವ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ’ ಎಂದು ತಿಳಿಸಿದರು.

ಸಾಹಿತಿ ಪ್ರಧಾನ ಗುರುದತ್ ಇದ್ದರು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.