ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತಿಪ್ಪೇಸ್ವಾಮಿ ಜನ್ಮ ಶತಮಾನೋತ್ಸವ ಪ್ರಯುಕ್ತ ಸ್ಪರ್ಧೆ

Published : 20 ಸೆಪ್ಟೆಂಬರ್ 2024, 8:52 IST
Last Updated : 20 ಸೆಪ್ಟೆಂಬರ್ 2024, 8:52 IST
ಫಾಲೋ ಮಾಡಿ
Comments

ಮೈಸೂರು: ಪಿ.ಆರ್.ತಿಪ್ಪೇಸ್ವಾಮಿ ಪ್ರತಿಷ್ಠಾನದಿಂದ ಪಿ.ಆರ್.ತಿಪ್ಪೇಸ್ವಾಮಿ ಜನ್ಮ ಶತಮಾನೋತ್ಸವದ ಅಂಗವಾಗಿ ಇಲ್ಲಿನ ವಿಜಯನಗರದ ಶ್ರೀಕಲಾನಿಕೇತನ ಕಲಾ ಶಾಲೆ ಆವರಣದಲ್ಲಿ ಆಯೋಜಿಸಿದ್ದ ‘ಕಲಾ ಮಹೋತ್ಸವ’ದ ಅಂಗವಾಗಿ ಗುರುವಾರ ನಡೆದ ಚಿತ್ರಕಲೆ ಸ್ಪರ್ಧೆಯಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಪರಿಸರ ಸಂರಕ್ಷಣೆ, ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆ, ವಿಜ್ಞಾನದ ಮಾದರಿಗಳು, ರಾಕೆಟ್, ಪ್ರಕೃತಿ, ಐತಿಹಾಸಿಕ ಸ್ಮಾರಕಗಳು, ಮೈಸೂರು ಅರಮನೆ, ಚಾಮುಂಡೇಶ್ವರಿ ಮೊದಲಾದ ಚಿತ್ರಗಳನ್ನು ಬಿಡಿಸಿದರು. ವಿಷಯ ನಿಗದಿ ಮಾಡಿರಲಿಲ್ಲವಾದ್ದರಿಂದ ತಮ್ಮ ಕಲ್ಪನೆಯ ಚಿತ್ರಗಳಿಗೆ ಅವರು ಬಣ್ಣ ತುಂಬಿದರು.

ನಗರದ ಮತ್ತು ಜಿಲ್ಲೆಯ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಖಾಸಗಿ ಶಾಲೆಗಳ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎಲ್‌ಕೆಜಿಯಿಂದ 2ನೇ ತರಗತಿ, 3ರಿಂದ 6ನೇ ತರಗತಿ ಮತ್ತು 7ರಿಂದ 10ನೇ ತರಗತಿ ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು.

ಕರ್ನಾಟಕ ಲಲಿತಕಲಾ ಅಕಾಡೆಮಿಯಿಂದ ನಡೆದ ಚಿತ್ರಕಲಾ ಶಿಬಿರದಲ್ಲಿ ತುಮಕೂರಿನ ಎಂ.ಆರ್.ಲೋಕೇಶ್, ಧಾರವಾಡದ ನಿಂಗಪ್ಪ ಆರ್.ನಾಯಕ, ಮೈಸೂರಿನ ಎಂ.ನಾಗರಾಜು. ಬೀದರ್‌ನ ಸಿದ್ದಪ್ಪ, ತುಮಕೂರಿನ ಯು.ಪವಿತ್ರಾ, ಬಲರಾಮ್, ಕಾರವಾರದ ಸುಬ್ರಾಯ ಸಿದ್ದಿ, ರಾಯಚೂರಿನ ರವಿ, ಮಲ್ಲಿಕಾರ್ಜುನ, ಕಲಬುರಗಿಯ ಸೂರ್ಯಕಾಂತ ನಂದೂರ್, ಬಾಲಾಜಿ ಗಾಯಕವಾಡ, ಚಾಮರಾಜನಗರದ ವಿನೋದ, ದಾವಣಗೆರೆಯ ಡಿ.ಎಚ್.ಸುರೇಶ್, ವಿಜಯಪುರದ ರವಿ ನಾಯಕ, ಚಿಕ್ಕಬಳ್ಳಾಪುರದ ಎಚ್.ವಿ.ಜಾನ್ ಪಾಲ್ಗೊಂಡಿದ್ದರು.

ಮೂರು ದಿನಗಳಿಂದ ನಡೆದ ಕಲಾ ಮಹೋತ್ಸವದ ಸಮಾರೋಪ ಶುಕ್ರವಾರ ಸಂಜೆ 4ಕ್ಕೆ ನಡೆಯಲಿದೆ. ಚಿರಂಜೀವಿ ಸಿಂಗ್, ಕೆ.ವಿ.ಸುಬ್ರಹ್ಮಣ್ಯಂ, ಎಂ.ಆರ್.ಬಾಳಿಕಾಯಿ, ಜಿ.ಎಸ್.ಖಂಡೇರಾವ್, ವಿ.ಟಿ.ಕಾಳೆ, ಎಂ.ಜೆ.ಕಮಲಾಕ್ಷಿ, ಆರ್.ಜಿ.ಸಿಂಗ್, ಡಿ.ಎ.ಉಪಾಧ್ಯ, ರಾಘವೇಂದ್ರ ಮೂರ್ತಿ, ಅಶೋಕ್ ಮೂಡಿಗೆರೆ, ಮಧು ಶಿಲ್ಪ ಆಚಾರ್ಯ, ದಿಲೀಪ್ ಕುಮಾರ್ ಕಾಳೆ, ಪಿ.ಪರಶುರಾಮ್, ಸಿ.ಕಣ್ಮೇಶ್, ಸೈಯದ್ ಆಸಿಫ್ ಅಲಿ, ಎಸ್.ಎಚ್.ನಾಗರಾಜು, ಮೋಹನ್ ಪಾಂಚಾಳ್, ಜೆ.ನರಸಿಂಹರಾಜು, ಡಿ.ಅಭಿಲಾಷ್, ಎಂ.ಎಸ್.ಲಿಂಗರಾಜು ಅವರಿಗೆ ‘ಪಿಆರ್‌ಟಿ ಕಲಾ ಪ್ರಶಸ್ತಿ’ ಪ್ರದಾನ ಮಾಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT