ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಲಡ್ಡು ತಯಾರಿಕೆ: ತಿರುಪತಿ ಅರ್ಚಕರಿಗೆ ಮೈಸೂರಲ್ಲಿ ತರಬೇತಿ

Published : 24 ಸೆಪ್ಟೆಂಬರ್ 2024, 13:58 IST
Last Updated : 24 ಸೆಪ್ಟೆಂಬರ್ 2024, 13:58 IST
ಫಾಲೋ ಮಾಡಿ
Comments

ಮೈಸೂರು: ಆಂಧ್ರಪ್ರದೇಶದ ತಿರುಪತಿ ದೇವಾಲಯದ ಅರ್ಚಕರ ತಂಡವೊಂದು ನಗರದಲ್ಲಿರುವ ಸಿಎಫ್‌ಟಿಆರ್‌ಐ (ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆ)ಯಲ್ಲಿ ಎರಡು ತಿಂಗಳ ಹಿಂದೆ ಲಡ್ಡು ತಯಾರಿಕೆ ಕುರಿತು ತರಬೇತಿ ಪಡೆದು ತೆರಳಿದೆ.

‘ಸಂಸ್ಥೆಯು ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಸಂಶೋಧನೆಗಳನ್ನು ನಡೆಸುತ್ತದೆ. ಆಹಾರ ಪ್ಯಾಕೇಜಿಂಗ್‌, ಸಂರಕ್ಷಣಾ ವಿಧಾನಗಳ ಬಗ್ಗೆ ಆಧುನಿಕ ವ್ಯವಸ್ಥೆ ಹೊಂದಿದೆ. ಹೀಗಾಗಿ ತರಬೇತಿ ನೀಡಲಾಗಿದೆ’ ಎಂದು ಮೂಲಗಳು ತಿಳಿಸಿವೆ.

‘ಸಂಸ್ಥೆಗೆ ತಿರುಪತಿಯಿಂದ 20 ಅರ್ಚಕರ ತಂಡವು ಆಗಮಿಸಿತ್ತು. ಲಡ್ಡು ತಯಾರಿಯಲ್ಲಿ ಅನುಸರಿಸಬೇಕಾದ ವೈಜ್ಞಾನಿಕ ಪ್ರಮಾಣಗಳ ಬಗ್ಗೆ ಅವರಿಗೆ ಮಾಹಿತಿ ನೀಡಲಾಗಿದೆ. ಬಣ್ಣ, ತುಪ್ಪ ಹಾಗೂ ಇತರೆ ಸಾಮಾಗ್ರಿಯ ಬಳಕೆ ಹಾಗೂ ಲಡ್ಡುವಿನ ಪ್ಯಾಕೇಜಿಂಗ್‌ ಬಗ್ಗೆ ತರಬೇತಿ ನೀಡಿದ್ದೇವೆ’ ಎಂದು ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದರು.

‘ತಂತ್ರಜ್ಞಾನ ಹಾಗೂ ಸಂಶೋಧನೆಯ ಅವಕಾಶವಿರುವುದರಿಂದ ಸಂಸ್ಥೆಯಲ್ಲಿ ತರಬೇತಿ ನೀಡಲಾಗಿದೆ. ದೇವಾಲಯದಲ್ಲಿ ಲಡ್ಡುವಿಗೆ ಬಳಸಲಾದ ತುಪ್ಪವನ್ನು ಖಾಸಗಿ ಪ್ರಯೋಗಾಲಯದಲ್ಲಿ ಪರೀಕ್ಷಿಸಲಾಗಿದೆ. ನ್ಯಾಯಾಲಯವು ಸರ್ಕಾರಿ ಪ್ರಯೋಗಾಲಯದ ಮೂಲಕ ಪರೀಕ್ಷೆ ಮಾಡಿಸುವ ಸಾಧ್ಯತೆಯಿದ್ದು, ನಮ್ಮ ಸಂಸ್ಥೆಯಲ್ಲಿ ಅದಕ್ಕೆ ಬೇಕಾದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ವಿಶ್ಲೇಷಿಸುವ ಪ್ರಯೋಗಾಲವೂ ಇದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT