ಮೈಸೂರು: ಮಹಾಜನ ಕಾಲೇಜು ಹಾಗೂ ಮಹಾರಾಣಿ ಕಾಲೇಜಿನ ಅಥ್ಲೀಟ್ಗಳು ಮಂಗಳವಾರ ಇಲ್ಲಿನ ಓವೆಲ್ ಮೈದಾನದಲ್ಲಿ ಆರಂಭಗೊಂಡ ಮೈಸೂರು ವಿಶ್ವವಿದ್ಯಾಲಯ ಮಟ್ಟದ ಅಂತರ ಕಾಲೇಜುಗಳ ಅಥ್ಲೆಟಿಕ್ಸ್ ಕೂಟದಲ್ಲಿ ಕ್ರಮವಾಗಿ ಪುರುಷ ಹಾಗೂ ಮಹಿಳೆಯರ ವಿಭಾಗದಲ್ಲಿ ಪಾರಮ್ಯ ಮೆರೆದರು.

ಪುರುಷರ ವಿಭಾಗದಲ್ಲಿ ಮಹಾಜನ ಕಾಲೇಜು ಸ್ಪರ್ಧಿಗಳಿಗೆ ಯುವರಾಜ ಕಾಲೇಜು ಹಾಗೂ ಮಹಾರಾಜ ಕಾಲೇಜಿನ ಸ್ಪರ್ಧಿಗಳು ಹೆಚ್ಚು ಪೈಪೋಟಿ ತೋರಿದರು. ಮಹಿಳೆಯರ ವಿಭಾಗದಲ್ಲಿ 100 ಮೀ. ಓಟದ ಸ್ಪರ್ಧೆಯಲ್ಲಿ ಜೆಎಸ್ಎಸ್ ಮಹಿಳಾ ಕಾಲೇಜಿನ ಅಥ್ಲೀಟ್ ಎಚ್.ಎಸ್. ಹರ್ಷಿತಾ 12.34 ಸೆಕೆಂಡ್ಗಳಲ್ಲಿ ಗುರಿ ತಲುಪಿ ವೇಗದ ಓಟಗಾರ್ತಿಯಾಗಿ ಹೊರಹೊಮ್ಮಿದರು.

ಚಾಲನೆ:

ಮೈಸೂರು ವಿ.ವಿ. ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗವು ಆಯೋಜಿಸಿರುವ ಮೂರು ದಿನಗಳ ಅಂತರ ಕಾಲೇಜು ಪುರುಷ ಮತ್ತು ಮಹಿಳಾ ಅಥ್ಲೆಟಿಕ್ ಕೂಟಕ್ಕೆ ಜೆಎಸ್ಎಸ್ ವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕ ಪ್ರೊ. ನಿರಂಜನ್ ಮೂರ್ತಿ ಚಾಲನೆ ನೀಡಿದರು.

ಮೈಸೂರು ವಿ.ವಿ. ಹಣಕಾಸು ಅಧಿಕಾರಿ ಕೆ.ಎಸ್. ರೇಖಾ, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಸಿ. ವೆಂಕಟೇಶ್, ವಿವಿಧ ಕಾಲೇಜುಗಳ ದೈಹಿಕ ಶಿಕ್ಷಣ ನಿರ್ದೇಶಕರು ಇದ್ದರು.

37 ಕಾಲೇಜುಗಳಿಂದ 400ಕ್ಕೂ ಸ್ಪರ್ಧಿಗಳು ಈ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದು, 24 ಅಥ್ಲೆಟಿಕ್ ಸ್ಪರ್ಧೆಗಳು ನಡೆಯಲಿವೆ.

ಮೊದಲ ದಿನದ ಫಲಿತಾಂಶ: ಪುರುಷರು:

200 ಮೀ. ಓಟ: 1. ಆರ್. ಪ್ರಜ್ವಲ್ ( ಟಿಟಿಎಲ್ ಕಾಲೇಜು. ಕಾಲ: 22.96 ಸೆಕೆಂಡ್)–1, ಎಲ್. ಪವನ್ (ಟ್ರಿನಿಟಿ ಕಾಲೇಜು)–2, ಎಸ್. ಮನು (ಎಸ್ಬಿಆರ್ಆರ್ ಎಂಎಫ್ಜಿಸಿ)–3; 800 ಮೀ. ಓಟ: ಭರತ್ ಗಿರಿಗೌಡ (ಎಸ್ಬಿಆರ್ಆರ್ ಎಂಎಫ್ಜಿಸಿ. ಕಾಲ: 2 ನಿಮಿಷ, 02.54 ಸೆಕೆಂಡ್)–1, ಎಸ್. ಶಶಾಂಕ್ ಗೌಡ ( ಸೇಪಿಯಂಟ್ ಕಾಲೇಜು)–2, ಆನಂದ್ ಆರ್. ಕುಮಾರ್ ( ಟ್ರಿನಿಟಿ ಕಾಲೇಜು)–3; 110 ಮೀ. ಹರ್ಡಲ್ಸ್: ಕೆ. ಕುಶಾಲ್ (ಯುವರಾಜ ಕಾಲೇಜು. ಕಾಲ: 20.57 ಸೆಕೆಂಡ್)–1, ಕೆ.ವಿ. ಪ್ರೇಮ್ ಕುಮಾರ್ ( ಎಸ್ಬಿಆರ್ಆರ್ ಎಂಎಫ್ಜಿಸಿ)–2, ಎಂ.ಪಿ. ಪ್ರಜ್ವಲ್ ( ಪಿಜಿಎಸ್ಸಿ ಎಂಜಿಎಂ)–3.

ಜಾವೆಲಿನ್ ಥ್ರೋ: ಟಿ.ಇ. ಗೌತಮ್ ( ಮಹಾರಾಜ ಕಾಲೇಜು. ದೂರ: 48.41 ಮೀ)–1, ಎಂ.ಎಂ. ಕಾರ್ತಿಕ್ ನಾಯಕ್ ( ಯುವರಾಜ ಕಾಲೇಜು)–2, ಎಂ.ಎನ್. ಬಾಲಾಜಿ (ಮಹಾಜನ ಕಾಲೇಜು)–3. ಟ್ರಿಪಲ್ ಜಂಪ್: ಗಣೇಶ್ ಕುಮಾರ್ (ಮಹಾರಾಜ ಕಾಲೇಜು)–1, ಬಿ.ಎಸ್. ರೋಹಿತ್ ( ಯುವರಾಜ ಕಾಲೇಜು)–2, ಕುಮಾರ್ (ಸ.ಪ್ರ.ದ. ಕಾಲೇಜು, ಹನಗೋಡು)–3.

ಮಹಿಳಾ ವಿಭಾಗ

100 ಮೀ. ಓಟ: ಎಚ್.ಎಸ್. ಹರ್ಷಿತಾ (ಜೆಎಸ್ಎಸ್ ಮಹಿಳಾ ಕಾಲೇಜು. ಕಾಲ: 12.34 ಸೆಕೆಂಡ್)–1, ಎನ್. ದೀಕ್ಷಿತಾ (ಟೆರೇಷಿಯನ್ ಕಾಲೇಜು)–2, ಎಸ್. ದೀಕ್ಷಿತಾ (ಯುವರಾಜ ಕಾಲೇಜು)–3; 800 ಮೀ. ಓಟ.: ಕೆ.ಎಸ್. ಲಕ್ಷ್ಮಿ (ಮಹಾರಾಣಿ ವಿಜ್ಞಾನ ಕಾಲೇಜು. ಕಾಲ: 2 ನಿಮಿಷ, 33.43 ಸೆಕೆಂಡ್)–1, ಕೆ.ಪಿ. ಪೂಜಾ (ಪಿಆರ್ಎಂ ವಿಜಯ ಕಾಲೇಜು, ತಿ. ನರಸೀಪುರ)–2, ಎಂ. ಸಹನಾ (ಪಿಆರ್ಎಂ ವಿಜಯ ಕಾಲೇಜು, ತಿ. ನರಸೀಪುರ)–3.

100 ಮೀ. ಹರ್ಡಲ್ಸ್: 1. ಎಸ್.ಎ. ಜೀವಿತಾ (ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು. ಕಾಲ: 21.40 ಸೆಕೆಂಡ್)–1, ಡಿ.ಎಂ. ಚಂದ್ರಿಕಾ (ಮಹಾರಾಣಿ ಮಹಿಳಾ ಕಲಾ ಕಾಲೇಜು)–2, ಎಂ.ಎಸ್. ಮಾನಸಾ (ಟೆರೇಷಿಯನ್ ಕಾಲೇಜು)–3; ಹೈಜಂಪ್: ಡಿ.ಎ. ಚಂದ್ರಿಕಾ (ಮಹಾರಾಣಿ ಕಲಾ ಕಾಲೇಜು. ಎತ್ತರ: 1.20 ಮೀ)–1, ಜೀವಿತಾ (ಟೆರೇಷಿಯನ್ ಕಾಲೇಜು)–2,3. ಎಚ್.ವೈ. ಸೌಜನ್ಯಾ (ಸ.ಪ್ರ.ದ. ಕಾಲೇಜು, ಕೆ.ಆರ್. ನಗರ)–3.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.