ಮೈಸೂರು: ‘ವಚನಗಳು ಬದುಕಿನ ಪ್ರಯೋಗಾಲಯಗಳಾಗಿವೆ’ ಎಂದು ಇಲ್ಲಿನ ನಟರಾಜ ಪ್ರತಿಷ್ಠಾನದ ವಿಶೇಷ ಅಧಿಕಾರಿಯಾದ ಡಾ.ಎಸ್.ಶಿವರಾಜಪ್ಪ ವ್ಯಾಖ್ಯಾನಿಸಿದರು.
ನಗರದ ನಟರಾಜ ಪ್ರತಿಷ್ಠಾನದ ವಾತ್ಸಲ್ಯ ಬಿ.ಇಡಿ ಕಾಲೇಜಿನಲ್ಲಿ ನಡೆದ ವಚನ ವಾಚನ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ವಚನ ಸಾಹಿತ್ಯವೆಂದರೆ ಅದೊಂದು ಚಳವಳಿ. ಜಗತ್ತಿನ ಎಲ್ಲಾ ಸಮಸ್ಯೆಗಳಿಗೂ ವಚನಗಳಲ್ಲಿ ಪರಿಹಾರವಿದೆ’ ಎಂದರು.
‘ಅಕ್ಕಮಹಾದೇವಿಯ ವಚನಗಳನ್ನು ಗಮನಿಸಿದರೆ ಆಕೆ ದಿಟ್ಟ ಮಹಿಳೆ ಎನ್ನುವುದು ವೇದ್ಯವಾಗುತ್ತದೆ’ ಎಂದು ಹೇಳಿದರು.
‘ವಚನಗಳ ಸಾರವನ್ನು, ಸಂದೇಶವನ್ನು ಸಮಾಜಕ್ಕೆ ತಲುಪಿಸಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಶಿಕ್ಷಕರು ಹಾಗೂ ಯುವಕರು ಕೆಲಸ ಮಾಡಬೇಕಾಗಿದೆ’ ಎಂದರು.
ಶರಣ ಸಾಹಿತ್ಯ ಪರಿಷತ್ತು ನಗರ ಘಟಕದ ಅಧ್ಯಕ್ಷ ಮ.ಗು. ಸದಾನಂದಯ್ಯ ಮಾತನಾಡಿ, ‘ಅಕ್ಕಮಹಾದೇವಿ ಹೆಣ್ಣು ಮಕ್ಕಳಿಗೆ ಸದಾ ಕಾಲಕ್ಕೂ ಸ್ಫೂರ್ತಿಯಾಗಿದ್ದಾಳೆ’ ಎಂದು ನೆನೆದರು.
ಹೊಸಮಠ ಅಧ್ಯಕ್ಷ ಚಿದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಾತ್ಸಲ್ಯ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಮಹೇಶ ದಳಪತಿ, ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷೆ ಶಾರದ ಶಿವಲಿಂಗಸ್ವಾಮಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.