ಮೈಸೂರು: ‘ವಚನ ಸಾಹಿತ್ಯವು ಅನುಭವ ಮತ್ತು ಮಾನವೀಯತೆಯ ಸಂಗಮ’ ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಹೇಳಿದರು.

ಶರಣು ವಿಶ್ವವಚನ ಫೌಂಡೇಷನ್ ಹಾಗೂ ಜೆಎಸ್ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು ಸಹಯೋಗದಲ್ಲಿ ಹುಣಸೂರು ತಾಲ್ಲೂಕಿನ ಕೆಂಡಗಣ್ಣಸ್ವಾಮಿ ಗದ್ದಿಗೆಯಲ್ಲಿ ನಡೆಯುತ್ತಿರುವ ಎನ್ಎಸ್ಎಸ್ ಶಿಬಿರದಲ್ಲಿ ಮೈಸೂರಿನ ಯು.ಎಂ. ಉಮಾದೇವಿ ಮತ್ತು ಕೆ.ಜಿ ಮಹದೇವಸ್ವಾಮಿ ದತ್ತಿ ಅಂಗವಾಗಿ ಹಮ್ಮಿಕೊಂಡಿದ್ದ ‘ವಚನಗಳ ನಡಿಗೆ’ ಕಾರ್ಯಕ್ರಮದಲ್ಲಿ ‘ವಚನ ಸಾಹಿತ್ಯ ಮತ್ತು ವೈಚಾರಿಕತೆ’ ಕುರಿತು ಉಪನ್ಯಾಸ ನೀಡಿದರು.

‘ಎನ್ಎಸ್ಎಸ್ ಶಿಬಿರವು ಸೇವಾ ಚಟುವಟಿಕೆಗಳಿಗೆ ಸೀಮಿತವಾಗದೆ, ಸಮಾಜವನ್ನು ಅರಿಯುವ, ಮೌಲ್ಯಾಧಾರಿತ ಬದುಕಿನ ಕುರಿತು ಚಿಂತಿಸುವ ವೇದಿಕೆ ಆಗಬೇಕು’ ಎಂದು ಆಶಿಸಿದರು.

ವಚನ ವಾಚಿಸಿದ 42 ವಿದ್ಯಾರ್ಥಿಗಳಿಗೆ ‘ವಚನ ದೀವಿಗೆ’ ಪ್ರಮಾಣಪತ್ರ ಹಾಗೂ ಬಸವಭಾನು ಸಂಚಿಕೆ ವಿತರಿಸಲಾಯಿತು.

ಫೌಂಡೇಷನ್ ಸಂಸ್ಥಾಪಕಿ ರೂಪಾ ಕುಮಾರಸ್ವಾಮಿ, ಮರಿಮಲ್ಲಪ್ಪ ಪಿಯು ಕಾಲೇಜಿನ ಶೈಕ್ಷಣಿಕ ಅಧಿಕಾರಿ ಮಂಗಳಾ ಮುದ್ದುಮಾದಪ್ಪ ಮಾತನಾಡಿದರು. ಉಮಾ ಮಹದೇವಸ್ವಾಮಿ ಅವರು ವಚನ ಗಾಯನ ಮೂಲಕ ಶಿಬಿರಕ್ಕೆ ಸಾಂಸ್ಕೃತಿಕ ರಂಗು ತುಂಬಿದರು.

ಶರಣು ವಿಶ್ವವಚನ ಫೌಂಡೇಷನ್ ಜಿಲ್ಲಾ ಘಟಕದ ಅಧ್ಯಕ್ಷ ಅನಿಲ್ಕುಮಾರ್ ವಾಜಂತ್ರಿ, ನಿವೃತ್ತ ಪ್ರಾಂಶುಪಾಲ ಕೆ.ಜಿ. ಮಹದೇವಸ್ವಾಮಿ, ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಎನ್.ಸಂತೋಷ್ ಕುಮಾರ್, ಫೌಂಡೇಷನ್ ಕೇಂದ್ರೀಯ ಸಂಚಾಲಕ ವಿ.ಲಿಂಗಣ್ಣ, ಉಪಾಧ್ಯಕ್ಷ ಶಿವಪುರ ಉಮಾಪತಿ ಹಾಗೂ ಶಿಕ್ಷಕರಾದ ರವಿಕುಮಾರ್, ರಾಜು, ಮಹೇಶ್, ಗಿರೀಶ್, ರೂಪಾ, ಸಿ.ಆರ್.ಮಾನಸ, ಚಂದನ, ರಶ್ಮಿತಾ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.