ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

'ವರುಣಕ್ಕೆ ಮಗನೇ ಎಂಎಲ್‌ಎ' ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ

Published 26 ಸೆಪ್ಟೆಂಬರ್ 2023, 11:22 IST
Last Updated 26 ಸೆಪ್ಟೆಂಬರ್ 2023, 11:22 IST
ಅಕ್ಷರ ಗಾತ್ರ

ಮೈಸೂರು: ‘ವಾಸ್ತವವಾಗಿ ಇಲ್ಲಿಗೆ (ವರುಣಕ್ಕೆ) ಯತೀಂದ್ರ ಸಿದ್ದರಾಮಯ್ಯನೇ ಶಾಸಕ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ತಾವು ಪ್ರತಿನಿಧಿಸುವ ವರುಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಉತ್ತನಹಳ್ಳಿ ಗ್ರಾಮದಲ್ಲಿ ಸೋಮವಾರ ನಡೆದ ‘ಪಶು ಸಖಿ’ಯರಿಗೆ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ, ‘ಇಲ್ಲಿ ಜಾಸ್ತಿ ಪ್ರಚಾರ ಮಾಡಿದವನೇ ಅವನು. ಉತ್ತನಹಳ್ಳಿಗೆ ನಾನು ಬರಲಾಗಲೇ ಇಲ್ಲ. ಆದರೂ ಮತ ಹಾಕಿದ್ದಕ್ಕೆ ಜನರಿಗೆ ಕೃತಜ್ಞತೆಗಳು’ ಎಂದರು.

ಕಾರ್ಯಕ್ರಮಕ್ಕೆ ತಾವು ಮಾತನಾಡುವಾಗ ವೇದಿಕೆಗೆ ಬಂದ ಪುತ್ರ ಯತೀಂದ್ರಗೆ ಸ್ವಾಗತವನ್ನೂ ಕೋರಿದರು. ‘ಅವರು ಇನ್ನೊಂದು ಕಾರ್ಯಕ್ರಮಕ್ಕೆ ಹೋಗಿದ್ದರು. ಆದ್ದರಿಂದ ತಡವಾಗಿ ಬಂದಿದ್ದಾರೆ’ ಎಂದು ಹೇಳಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT