ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವರ್ಕರ್ ಜಯಂತಿ ಕಾರ್ಯಕ್ರಮಕ್ಕೆ ಸರ್ಕಾರದಿಂದಲೇ ಅಡ್ಡಿ ಯತ್ನ: ಪ್ರತಾಪ‌ ಸಿಂಹ

Published 3 ಜೂನ್ 2023, 10:55 IST
Last Updated 3 ಜೂನ್ 2023, 10:55 IST
ಅಕ್ಷರ ಗಾತ್ರ

ಮೈಸೂರು: ಸಾವರ್ಕರ್ ಜಯಂತಿ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರವೇ ಪೊಲೀಸರು ಹಾಗೂ ಅಧಿಕಾರಿಗಳ‌ ಮೇಲೆ ಒತ್ತಡ ಹೇರಿ ಅಡ್ಡಿಪಡಿಸಿದೆ ಎಂದು ಸಂಸದ ಪ್ರತಾಪ‌ ಸಿಂಹ ದೂರಿದರು.

ಮುಕ್ತ ವಿ.ವಿ. ಆವರಣದಲ್ಲಿ ಶನಿವಾರ ಮಧ್ಯಾಹ್ನ ಪತ್ರಕರ್ತರಿಗೆ ಅವರು ಪ್ರತಿಕ್ರಿಯೆ‌ ನೀಡಿದರು. ಆಯೋಜಕರು ಶುಲ್ಕ ಕಟ್ಟಿ, ಸಭಾಂಗಣ ಕಾಯ್ದಿರಿಸಿದ್ದರು. ಆದರೆ ಇಲ್ಲದ ತಕರಾರು‌ ಮಾಡಲಾಗಿದೆ. ಸರ್ಕಾರದ ಕಡೆಯಿಂದ ಒತ್ತಡ ಬಂದ ಕಾರಣ ಕಾರ್ಯಕ್ರಮವನ್ನೇ ರದ್ದು ಮಾಡುವ ಪ್ರಯತ್ನ ನಡೆಯಿತು. ನಾವೆಲ್ಲ ಪ್ರತಿಭಟನೆ ಎಚ್ಚರಿಕೆ ನೀಡಿದ ಕಾರಣ ಮತ್ತೆ ಅನುಮತಿ ನೀಡಿದ್ದಾರೆ ಎಂದರು.

ಕಾಂಗ್ರೆಸ್ ಈ ರೀತಿಯ ನೀಚ ಮನಸ್ಥಿತಿ ಬಿಡಬೇಕು. ಎರಡೆರಡು ಜೀವಾವಧಿ ಶಿಕ್ಷೆಗೆ ಒಳಗಾದ ಏಕೈಕ ಭಾರತೀಯ ಸಾವರ್ಕರ್. ನೆಹರೂ ಸಹ ಅಷ್ಟು ಶಿಕ್ಷೆ ಅನುಭವಿಸಿಲ್ಲ. ಕಾಂಗ್ರೆಸ್ ನವರಿಗೆ ಯಾಕೆ ಸಾವರ್ಕರ್ ಬಗ್ಗೆ ತಗಾದೆ ಗೊತ್ತಿಲ್ಲ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ದ್ವೇಷದ ರಾಜಕಾರಣವನ್ನು ಕಾಂಗ್ರೆಸ್ ಇನ್ನಾದರೂ ಬಿಡಬೇಕು ಎಂದು ಹೇಳಿದರು.

ಗೋ ಹತ್ಯೆ ನಿಷೇಧ ಕಾಯ್ದೆ ಹಿಂತೆಗೆದುಕೊಳ್ಳಲು ಚಿಂತನೆ ನಡೆಸಿರುವುದಾಗಿ‌ ಪಶು ಸಂಗೋಪನೆ ಸಚಿವ ವೆಂಕಟೇಶ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಗೋವಿನ ಬಗ್ಗೆ ಮಹಾತ್ಮ ಗಾಂಧಿ ಭಾವನೆ ಏನಿತ್ತು ಎಂಬುದನ್ನು ಮೊದಲು ಕಾಂಗ್ರೆಸ್ ಅರ್ಥ ಮಾಡಿಕೊಳ್ಳಲಿ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT