ಮೈಸೂರು: ‘ನಾವು ದೇವರನ್ನೇ ಏಕವಚನದಲ್ಲಿ ಕರೆಯುತ್ತೇವೆ. ದೇವರನ್ನು ಯಾರಾದರೂ ಬಹುವಚನದಲ್ಲಿ ಕರೆಯೋದನ್ನು ನೋಡಿದೀರಾ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ಗೆ ತಿರುಗೇಟು ನೀಡಿದರು.

‘ಸಿದ್ದರಾಮಯ್ಯನವರೇ ಏಕವಚನದಲ್ಲಿ ಮಾತನಾಡುವುದನ್ನು ಕಡಿಮೆ ಮಾಡಿ’ ಎಂಬ ವಿಶ್ವನಾಥ್ ಹೇಳಿಕೆಗೆ ಶುಕ್ರವಾರ ಪ್ರತಿಕ್ರಿಯಿಸಿ, ‘ಇವನು ಏಕವಚನದಲ್ಲಿ ಎಷ್ಟು ಸಲ ಮಾತನಾಡಿದ್ದಾನೆ ಎಂಬುದನ್ನು ತೋರಿಸಲಾ, ಕೆ.ಆರ್. ನಗರ ಶಾಸಕರ ವಿರುದ್ಧ ಇವ ಯಾವ ಭಾಷೆಯಲ್ಲಿ ಮಾತನಾಡಿದ್ದ’ ಎಂದು ಪ್ರಶ್ನಿಸಿದರು.

‘ನಾನು ಉದ್ದೇಶಪೂರ್ವಕವಾಗಿ ಏಕವಚನದಲ್ಲಿ ಮಾತನಾಡುವುದಿಲ್ಲ. ಹಳ್ಳಿ ಭಾಷೆಯಲ್ಲಿ ಎಲ್ಲರೊಂದಿಗೂ ಏಕವಚನದಲ್ಲೇ ಮಾತನಾಡುತ್ತೇವೆ. ದೇವನಿಗೂ ಅವನು, ಇವನು ಅಂತ ಹೇಳಲ್ವಾ’ ಎಂದರು.

‘ನಾನು ಕಾಂಗ್ರೆಸ್ ಬಿಟ್ಟ ಬಳಿಕ ಸಿದ್ದರಾಮಯ್ಯ ನಾಯಕರಾಗಿ ಬೆಳೆದರು’ ಎಂಬ ವಿಶ್ವನಾಥ್ ಹೇಳಿಕೆಗೆ ಪ್ರತಿಕ್ರಿಯಿಸಿ, ‘ನೀವು ಪಕ್ಷಬಿಟ್ಟು ಹೋಗುವುದಕ್ಕೆ ಮುಂಚೆಯೇ ನಾನು ಮುಖ್ಯಮಂತ್ರಿ ಆಗಿಲ್ವಾ, ನೀವು ಹೋದ ಬಳಿಕ ಆಗಿದ್ದಾ? ನಾನು ಕಾಂಗ್ರೆಸ್ ಸೇರಲು ಕರ್ನಾಟಕದ ಕಾಂಗ್ರೆಸ್ನ ಯಾರೂ ಕಾರಣರಲ್ಲ. ಅಹ್ಮದ್ ಪಟೇಲ್ ಕಾರಣ ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸುತ್ತೇನೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.