ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಚ್‌.ಡಿ.ಕೋಟೆ | ಸಫಾರಿಯಲ್ಲಿ ಗಮನ ಸೆಳೆದ ಬಿಳಿ ಜಿಂಕೆ

Published 12 ಜೂನ್ 2023, 0:10 IST
Last Updated 12 ಜೂನ್ 2023, 0:10 IST
ಅಕ್ಷರ ಗಾತ್ರ

ಸತೀಶ್ ಬಿ.ಆರಾಧ್ಯ

ಎಚ್‌.ಡಿ.ಕೋಟೆ (ಮೈಸೂರು ಜಿಲ್ಲೆ): ತಾಲ್ಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಅಂತರಸಂತೆ ವಲಯದ ತಾರಕ ಜಲಾಶಯದ ಹಿನ್ನೀರು ಪ್ರದೇಶದ ರಸೂಲೈನ್ ಸಮೀಪ ಬುಧವಾರ ಬೆಳಿಗ್ಗೆ ಸಫಾರಿಯಲ್ಲಿ ಜಿಂಕೆಗಳ ಹಿಂಡಿನ ನಡುವೆ ಬಿಳಿ ಬಣ್ಣದ ಜಿಂಕೆ ಕಾಣಿಸಿಕೊಂಡಿತು. ಮಂಗಳವಾರ ಇದೇ ವಲಯದಲ್ಲಿ ಕಪ್ಪು ಚಿರತೆ ಕಾಣಿಸಿಕೊಂಡಿತ್ತು.

‘ಈ ಜಿಂಕೆ ಮೆಲನಿನ್ ‌(ವರ್ಣದ್ರವ್ಯ) ಹೆಚ್ಚಾಗಿ ಬಿಳಿ ಬಣ್ಣದೊಂದಿಗೆ ಹುಟ್ಟಿದೆ. ಇಂಥ ಪ್ರಾಣಿಗಳು ಕಾಡಿನಲ್ಲಿ ಬದುಕುವುದು ಕಷ್ಟ. ಮಾಂಸಾಹಾರಿ ಪ್ರಾಣಿಗಳಿಗೆ ಬಹಳ ಸುಲಭವಾಗಿ ತುತ್ತಾಗುವ ಸಾಧ್ಯತೆ ಹೆಚ್ಚು’ ಎಂದು ವನ್ಯಜೀವಿ ಛಾಯಾಗ್ರಾಹಕರಾದ ವಿನಯ್ ಮತ್ತು ಉಲ್ಲಾಸ್ ಶ್ಯಾನಭೋಗ್ ಹೇಳಿದರು.

‘ಮೆಲನಿನ್‌ ಕಡಿಮೆಯಾಗಿ ಕಪ್ಪಾಗಿ ಹುಟ್ಟುವ ಪ್ರಾಣಿಗಳಿಗೆ ಕಾಡಿನಲ್ಲಿ ಬದುಕುವುದು ಸಲೀಸು. ಬೇಟೆಯಾಡುವ ಪ್ರಾಣಿಯಾದರಂತೂ ರಾತ್ರಿ ವೇಳೆ ಬೇಟೆಗೆ ಹೆಚ್ಚು ಅನುಕೂಲವಾಗುತ್ತದೆ‘ ಎಂದರು.

ಎಚ್‌.ಡಿ.ಕೋಟೆ ತಾಲ್ಲೂಕಿನ ಅಂತರಸಂತೆ ವಲಯದ ತಾರಕ ಜಲಾಶಯದ ಹಿನ್ನೀರು ಪ್ರದೇಶದ ರಸೂಲೈನ್ ಸಮೀಪ ಜಿಂಕೆ ಗುಂಪಿನಲ್ಲಿ ಬುಧವಾರ ಬೆಳಿಗ್ಗೆ ಸಫಾರಿಯಲ್ಲಿ ಬಿಳಿ ಬಣ್ಣದ ಜಿಂಕೆ ಕಾಣಿಸಿಕೊಂಡಿತು ಪ್ರಜಾವಾಣಿ ಚಿತ್ರ: ಸತೀಶ್ ಬಿ ಆರಾಧ್ಯ
ಎಚ್‌.ಡಿ.ಕೋಟೆ ತಾಲ್ಲೂಕಿನ ಅಂತರಸಂತೆ ವಲಯದ ತಾರಕ ಜಲಾಶಯದ ಹಿನ್ನೀರು ಪ್ರದೇಶದ ರಸೂಲೈನ್ ಸಮೀಪ ಜಿಂಕೆ ಗುಂಪಿನಲ್ಲಿ ಬುಧವಾರ ಬೆಳಿಗ್ಗೆ ಸಫಾರಿಯಲ್ಲಿ ಬಿಳಿ ಬಣ್ಣದ ಜಿಂಕೆ ಕಾಣಿಸಿಕೊಂಡಿತು ಪ್ರಜಾವಾಣಿ ಚಿತ್ರ: ಸತೀಶ್ ಬಿ ಆರಾಧ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT