ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು–ಕೊಡಗು ಲೋಕಸಭಾ ಕ್ಷೇತ್ರ: ಮಹಿಳಾ ಮತದಾರರ ಮೇಲುಗೈ

ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಅವರ ಸಂಖ್ಯೆ ಜಾಸ್ತಿಯೇ ಇದೆ
Published 20 ಮಾರ್ಚ್ 2024, 8:34 IST
Last Updated 20 ಮಾರ್ಚ್ 2024, 8:34 IST
ಅಕ್ಷರ ಗಾತ್ರ

ಮೈಸೂರು: ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಮಹಿಳಾ ಮತದಾರರು ಹೆಚ್ಚಿದ್ದು, ಫಲಿತಾಂಶ ನಿರ್ಧರಿಸುವಷ್ಟು ‘ಶಕ್ತಿ’ ಹೊಂದಿದ್ದಾರೆ.

ಜಿಲ್ಲಾಡಳಿತ ನೀಡಿರುವ ಮತದಾರರ ಪಟ್ಟಿ ಪ್ರಕಾರ (ಮಾರ್ಚ್‌ 15ರಲ್ಲಿದ್ದಂತೆ) ಕ್ಷೇತ್ರದಲ್ಲಿ ಒಟ್ಟು 20,72,337 ಮತದಾರರಿದ್ದಾರೆ. ಪುರುಷರು 10,17,120 ಇದ್ದರೆ, 10,55,035 ಮಹಿಳೆಯರಿದ್ದಾರೆ. ಅಂದರೆ, ಪುರುಷ
ರಿಗಿಂತ 37,915 ಹೆಚ್ಚಿದ್ದಾರೆ.

‘ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ಸೇರ್ಪಡೆಯಾದವರಲ್ಲೂ ಮಹಿಳೆಯರೇ ಹೆಚ್ಚಿದ್ದಾರೆ. ಪಟ್ಟಿಗೆ ಹೆಸರು ಸೇರಿಸಲು ಇನ್ನೂ ಅವಕಾಶವಿದ್ದು, ಮತ್ತಷ್ಟು ಮಹಳೆಯರು ಸೇರ್ಪಡೆಯಾಗುವ ಸಾಧ್ಯತೆ ಇದೆ’ ಎನ್ನುತ್ತದೆ ಜಿಲ್ಲಾಡಳಿತ.

‘ಕ್ಷೇತ್ರದ ಎಲ್ಲ (ಜಿಲ್ಲೆಯ 6 ಹಾಗೂ ಕೊಡಗಿನ 2) ವಿಧಾನಸಭೆ ಕ್ಷೇತ್ರಗಳಲ್ಲೂ ಮಹಿಳೆಯರೇ ಹೆಚ್ಚಿದ್ದಾರೆ. ಫಲಿತಾಂಶವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆ ಇರುವುದರಿಂದ ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷದವರು ಅವರ ಮನಗೆಲ್ಲಬೇಕು’ ಎಂಬುದು ಚುನಾವಣಾ ವಿಮರ್ಶಕರ ವಿಶ್ಲೇಷಣೆಯಾಗಿದೆ.

ಒಮ್ಮೆಯಷ್ಟೇ ಮಹಿಳೆ ಗೆಲುವು

1951ರಿಂದ 2019ರವರೆಗೆ ಕ್ಷೇತ್ರವು 17 ಚುನಾವಣೆಗಳನ್ನು ಕಂಡಿದೆ. ಈಗಿನದ್ದು 18ನೇ ಚುನಾವಣೆ. ಆದರೆ, ಈವರೆಗೆ ಒಬ್ಬ ಮಹಿಳೆ ಮಾತ್ರ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಕಣಕ್ಕಿಳಿದಿದ್ದ ಮಹಿಳೆಯರ ಸಂಖ್ಯೆಯೂ ಕಡಿಮೆಯೇ. ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಪುತ್ರಿ ಚಂದ್ರಪ್ರಭಾ ಅರಸ್‌ 1991ರಲ್ಲಿ ಗೆದ್ದಿದ್ದರು. ಬಿಜೆಪಿ ಅಭ್ಯರ್ಥಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಅವರನ್ನು ಸೋಲಿಸಿದ್ದರು.

ಮಹಿಳಾ ಮತದಾರರು ಹೆಚ್ಚಿದ್ದರೂ ಮಹಿಳೆಯರಿಗೆ ಟಿಕೆಟ್ ಸಿಗುತ್ತಿಲ್ಲ. ಪಡೆದುಕೊಳ್ಳುವಲ್ಲಿ ನಾಯಕಿಯರು ಯಶಸ್ಸು ಕಂಡಿಲ್ಲ. ಈ ಬಾರಿ ಬಿಜೆಪಿಯು ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಟಿಕೆಟ್ ನೀಡಿದೆ. ಕಾಂಗ್ರೆಸ್‌ ಅಭ್ಯರ್ಥಿಯನ್ನು ಪ್ರಕಟಿಸಿಲ್ಲ. ಎರಡೂ ಪ್ರಮುಖ ಪಕ್ಷಗಳಲ್ಲೂ ಆಕಾಂಕ್ಷಿಗಳ ಪಟ್ಟಿಯಲ್ಲಿ ಮಹಿಳೆಯರ ಹೆಸರು ಕಂಡುಬರಲಿಲ್ಲ; ಕೇಳಿಬರಲೂ ಇಲ್ಲ!

ಈ ಮತದಾರರ ಮನವೊಲಿಸಿಕೊಳ್ಳಲು ಬಿಜೆಪಿಯು ಕೇಂದ್ರ ಸರ್ಕಾರ ನೀಡಿರುವ ‘ಉಜ್ವಲ’ ಮೊದಲಾದ ಯೋಜನೆಗಳ ಮೊರೆ ಹೋಗಿದ್ದರೆ, ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆಗಳ ಪ್ರಚಾರಕ್ಕೆ ಆದ್ಯತೆ ಕೊಡುವುದಕ್ಕೆ ಯೋಜಿಸಿದೆ. ಸ್ತ್ರೀಯರು ಬೆಂಬಲವು ಅಭ್ಯರ್ಥಿಯ ಗೆಲುವಿನ ಹಾದಿಯನ್ನು ಸುಗಮವಾಗಿಸಲಿದೆ ಎನ್ನುವುದು ರಾಜಕೀಯ ವಿಮರ್ಶಕರ ವಿಶ್ಲೇಷಣೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT