ಮೈಸೂರು: `ವ್ಯವಹಾರ ಅಧ್ಯಯನ ವಿದ್ಯಾರ್ಥಿಗಳು ವೃತ್ತಿಪರ ಆಡಳಿತ ಕೌಶಲ ಬೆಳೆಸಿಕೊಳ್ಳಬೇಕಾದ ಅಗತ್ಯ ವಿದೆ~ ಎಂದು ಫಾಲ್ಕ್‌ನ್ ಟೈರ್ಸ್ ಉತ್ಪಾ ದನಾ ವಿಭಾಗದ ಹಿರಿಯ ಉಪಾಧ್ಯಕ್ಷ ಎಸ್.ಕೆ.ಜಗಾಸಿಯ ಹೇಳಿದರು.

ಕೆಆರ್‌ಎಸ್ ರಸ್ತೆಯ ಪೂಜಾ ಭಾಗವತ ಸ್ಮಾರಕ ಮಹಾಜನ ಸ್ನಾತಕೋತ್ತರ ಕೇಂದ್ರದಲ್ಲಿ ವ್ಯವಹಾರ ಅಧ್ಯಯನ ವಿಭಾಗ ಸೋಮವಾರ ಏರ್ಪಡಿಸಿದ್ದ `ಕ್ಯಾಂಪಸ್ ಟು ಕಾರ್ಪೋರೇಟ್~ ಕಾರ್ಯಾಗಾರದಲ್ಲಿ ಮಾತನಾಡಿದರು.

`ಕೈಗಾರಿಕೆ, ಸಂಸ್ಥೆಗಳು ಹೊಸ ಕೌಶಲವನ್ನು ಮೈಗೂಡಿಸಿಕೊಳ್ಳಬೇಕು. ಹೊಸ ಕೌಶಲಕ್ಕೆ ಹೊಂದಿಕೊಳ್ಳದಿದ್ದರೆ ನಷ್ಟ ಅನುಭವಿಸಬೇಕಾಗುತ್ತದೆ. ಆಡಳಿತದಲ್ಲಿ ಉತ್ತಮ ಕೌಶಲ ಅಳವಡಿಸಿಕೊಳ್ಳದ್ದರಿಂದ ಮೈಸೂರಿನ ಅನೇಕ ಕೈಗಾರಿಕೆಗಳು ಮುಚ್ಚಿ ಹೋಗಿವೆ. ಆದ್ದರಿಂದ ವ್ಯವಹಾರ ಅಧ್ಯಯನ ವಿದ್ಯಾರ್ಥಿಗಳು ವಿಭಿನ್ನವಾಗಿ ಯೋಚಿಸುವ ಕಲೆಯನ್ನು ಕರಗತ ಮಾಡಿಕೊಳ್ಳಬೇಕು~ ಎಂದು ಹೇಳಿದರು.

`ಸ್ಪರ್ಧಾತ್ಮಕ ಜಗತ್ತಿನಲ್ಲಿ ಉದ್ಯೋ ಗಾವಕಾಶ ಪಡೆಯಲು ಸದಾ ಕ್ರಿಯಾಶೀಲರಾಗಿರಬೇಕು. ವ್ಯವಹಾರ ಅಧ್ಯಯನ ವಿಭಾಗದ ವಿದ್ಯಾರ್ಥಿಗಳು ತಮ್ಮದೇ ಆದಂತಹ ಐದು ಉತ್ತಮ ಗುಣಗಳನ್ನು ಹೊಂದಿರ ಬೇಕು. ಆ ಗುಣಗಳು ಬೇರೆಯವರಿಗೆ ಹೇಗೆ ಉಪಯೋಗವಾಗುತ್ತವೆ, ಜನ ರಿಗೆ ಏನು ಕೊಡಬೇಕು, ನೀವು ಕೊಡುವ ಮೌಲ್ಯವರ್ಧಿತ ಸೇವೆಯಂತೆ ಬೇರೆ ಯಾರಾದರೂ ಕೊಡುತ್ತಿದ್ದಾರಾ ಎಂಬುದನ್ನು ಗಮನಿಸಬೇಕು~ ಎಂದರು.

`ಕಾರ್ಪೋರೇಟ್ ಜಗತ್ತಿನಲ್ಲಿ ಕೆಲಸ ನಿರ್ವಹಿಸುವಾಗ ಬೇರೆಯವರ ಯಶಸ್ಸು ಹಾಗೂ ವೈಯಕ್ತಿಕ ಸೋಲಿ ನಿಂದ ಪಾಠ ಕಲಿಯಬೇಕು. ಅದನ್ನು ಜೀವನದಲ್ಲಿ ಅಳವಡಿಸಿಕೊಂಡು ಮುಂದೆ ಬರಬೇಕು~ ಎಂದು ಹೇಳಿದರು.

`ಪ್ರತಿ ನಿತ್ಯ ವೃತ್ತಪತ್ರಿಕೆ ಓದಬೇಕು. ಟಿವಿ, ಇಂಟರ್‌ನೆಟ್ ನೋಡಬೇಕು. ಬದಲಾವಣೆಗೆ ಹೊಂದಿಕೊಳ್ಳುವ ಸ್ವಭಾವ ಇರಬೇಕು. ನೀವು ಬದಲಾಗ ದಿದ್ದರೆ ಏನನ್ನೂ ಬದಲಾಯಿಸಲು ಸಾಧ್ಯವಿಲ್ಲ. ಯಂತ್ರಗಳನ್ನು ದುರಸ್ತಿ ಮಾಡಬಹುದು. ಆದರೆ, ಮನುಷ್ಯರನ್ನು ದುರಸ್ತಿ ಮಾಡುವುದು ಕಷ್ಟ ಸಾಧ್ಯ ಎಂಬುದನ್ನು ಅರಿತುಕೊಳ್ಳಬೇಕು~ ಎಂದು ಹೇಳಿದರು.

ಮಹಾಜನ ಶಿಕ್ಷಣ ಸಂಸ್ಥೆ ಅಧ್ಯಕ್ಷ ಆರ್.ವಾಸುದೇವ ಮೂರ್ತಿ, ಕಾರ್ಯದರ್ಶಿ ಜಿ.ಎಸ್.ಸುಬ್ರಹ್ನಣ್ಯಂ, ವಿಭಾಗದ ಮುಖ್ಯಸ್ಥ ಎಸ್.ಆರ್.ಎಸ್.ಖಾದ್ರಿ, ಸಂಸ್ಥೆಯ ನಿರ್ದೇಶಕ ಸಿ.ಕೆ.ರೇಣುಕಾಚಾರ್ಯ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.