ಮೈಸೂರು: ಆಗ್ರಾದ ತಾಜ್ಮಹಲ್ಗಿಂತ ಅತಿ ಹೆಚ್ಚು ವೀಕ್ಷಕರು ಭೇಟಿ ನೀಡುವ ವಿಶ್ವಪ್ರಸಿದ್ಧ `ಮೈಸೂರು ಅರಮನೆ~ಗೆ ಈಗ ನೂರರ ಸಂಭ್ರಮ. 1912ರಲ್ಲಿ ಮರು ನಿರ್ಮಾಣವಾದ `ಅಂಬಾವಿಲಾಸ~ ಅರಮನೆಗೆ ನೂರರ ಹರೆಯ. ಈ ಹಿನ್ನೆಲೆಯಲ್ಲಿ ನಗರದ ರಾಮಸನ್ಸ್ ಕಲಾ ಪ್ರತಿಷ್ಠಾನ ಹೊರತಂದಿರುವ `ಮೈಸೂರು ಅರಮನೆ ಚಿತ್ರ ಸಂಪುಟ~ವನ್ನು ಭಾನುವಾರ ಬಿಡುಗಡೆ ಮಾಡಲಾಯಿತು.

ರಾಮಸನ್ಸ್ ಕಲಾ ಪ್ರತಿಷ್ಠಾನದ ಕಾರ್ಯದರ್ಶಿ ಹಾಗೂ ಸಂಪುಟದ ಸಂಪಾದಕರೂ ಆದ ಆರ್.ಜಿ.ಸಿಂಗ್ ಮತ್ತು ರಘು ಧರ್ಮೇಂದ್ರ ಅವರ ಸಂಶೋಧನೆಯ ಫಲವಾಗಿ ಸುಮಾರು 85 ಛಾಯಾಚಿತ್ರಗಳನ್ನು ಒಳಗೊಂಡ ಸುಂದರ ಚಿತ್ರಸಂಪುಟ ಲೋಕಾರ್ಪ ಣೆಗೊಂಡಿದೆ.

ಕಟ್ಟಿಗೆ ಅರಮನೆ, ಹೊಸ ಅರಮನೆ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿರುವುದು, ಇನ್ಲೇ ವರ್ಕ್ಸ್ನಲ್ಲಿ ಮಾಡಿರುವ ಅರಮನೆ ಚಿತ್ರ, ಕುಂಚದಲ್ಲಿ ಅರಳಿದ ಸುಂದರ ಅರಮನೆ, ರಾಜಮಾತೆ ಕೆಂಪನಂಜಮ್ಮಣ್ಣಿ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲ್ಪನೆಯಲ್ಲಿ ಅರಳಿದ ಅರಮನೆ, ಕನ್ನಡನಾಡಿನ ಕಲೆ, ಕರಕುಶಲ ಕಲೆ, ವಾಸ್ತು ನಿರ್ಮಾಣ ಕೌಶಲ ಹಾಗೂ ಸದಭಿರುಚಿಯ ಸಂಸ್ಕೃತಿಯನ್ನು ಅನಾವರಣಗೊಳಿಸುವ ಬಣ್ಣದ ಚಿತ್ರಗಳು ಗಮನ ಸೆಳೆಯುತ್ತವೆ.

100 ಪುಟಗಳ ಚಿತ್ರ ಸಂಪುಟದಲ್ಲಿ ಎರಡು ಭಾಗಗಳಿದ್ದು, ಮೊದಲ ಭಾಗವು ಚಿತ್ರಗಳನ್ನು ಒಳಗೊಂಡಿದೆ. ಎರಡನೇ ಭಾಗವು ಗೆರೆಗಳುಳ್ಳ ಹಾಳೆಗಳನ್ನು ಹೊಂದಿದ್ದು ಪುಸ್ತಕ ಖರೀದಿಸಿದ ಪ್ರವಾಸಿಗರು ಅರಮನೆಗೆ ಭೇಟಿ ನೀಡಿದ ತಮ್ಮ ಅನುಭವಗಳನ್ನು ಬರೆದಿಟ್ಟುಕೊಳ್ಳಬಹುದು.
ಈ ಸಂದರ್ಭದಲ್ಲಿ ಮಾತನಾಡಿದ ಆರ್.ಜಿ.ಸಿಂಗ್, `ಅರಮನೆಗೆ 100 ವರ್ಷಗಳಾಗಿವೆ ಎಂದು ಹೇಗೆ ಹೇಳುತ್ತೀರಿ? ಎಂಬುದು ಹಲವರ ಪ್ರಶ್ನೆ. ಇದಕ್ಕೆ ಉತ್ತರ ಹುಡುಕಿಕೊಂಡು ಹೋದಾಗ ಹೈದರಾಬಾದ್ನ ಅಂಬೇಡ್ಕರ್ ವಿಶ್ವವಿದ್ಯಾನಿಲಯದಲ್ಲಿ ಬಿ.ಶ್ಯಾಮರಾವ್ ಅವರು ಬರೆದಿರುವ ಮಾಡರ್ನ್ ಮೈಸೂರು ಎಂಬ ಪುಸ್ತಕದಲ್ಲಿ ನಿಖರ ಇಸವಿ ದೊರೆಯಿತು. ಶ್ಯಾಮರಾವ್ ಈ ಪುಸ್ತಕವನ್ನು 1936ರಲ್ಲಿ ಪ್ರಕಟಿಸಿದ್ದಾರೆ. ಅಲ್ಲದೇ ಅನೇಕ ಪುರಾವೆಗಳನ್ನು ಆಧರಿಸಿ ಅರಮನೆಗೆ ನೂರು ವರ್ಷವಾಗಿದೆ ಎಂಬ ತೀರ್ಮಾನಕ್ಕೆ ಬರಲಾಗಿದೆ~ ಎಂದು ಹೇಳಿದರು.
ಲೋಕಾರ್ಪಣೆ:ಅರಮನೆ ಆಡಳಿತ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ಮೈಸೂರು ಅರಮನೆ ಚಿತ್ರಸಂಪುಟವನ್ನು ಲೋಕಾರ್ಪಣೆ ಮಾಡಿದರು. ಇತಿಹಾಸ ತಜ್ಞ ಪ್ರೊ.ಪಿ.ವಿ.ನಂಜರಾಜ ಅರಸ್, ರಾಮಸನ್ಸ್ ಕಲಾಪ್ರತಿಷ್ಠಾನದ ಕಾರ್ಯಾಧ್ಯಕ್ಷ ಎಂ.ಬಿ.ಸಿಂಗ್, ಅಧ್ಯಕ್ಷ ಡಿ.ರಾಮ್ಸಿಂಗ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.