ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಮಾಣಿಕತೆಗೆ ಮನ್ನಣೆ: ಜಾವೀದ್

Last Updated 13 ಡಿಸೆಂಬರ್ 2019, 15:19 IST
ಅಕ್ಷರ ಗಾತ್ರ

ವಿಜಯಪುರ: ‘ನಾವು ಮಾಡುವ ಕೆಲಸ ಪ್ರಾಮಾಣಿಕ ಮತ್ತು ಅತ್ಯುತ್ತಮವಾಗಿದ್ದರೆ ಅದಕ್ಕೆ ಮನ್ನಣೆ, ಗೌರವ ಸಿಕ್ಕೇ ಸಿಗುತ್ತದೆ’ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತರ ಫೆಡರೇಷನ್‌ನ ರಾಷ್ಟ್ರೀಯ ಅಧ್ಯಕ್ಷ ಡಾ.ಜಾವೀದ್ ಜಮಾದಾರ ಹೇಳಿದರು.

ನಗರದ ಬಿಎಲ್‌ಡಿಇ ಎ.ಎಸ್.ಪಾಟೀಲ ವಾಣಿಜ್ಯ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕದಿಂದ ಹಮ್ಮಿಕೊಂಡಿದ್ದ ಎನ್‌ಎಸ್‌ಎಸ್‌ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಭ್ರಷ್ಟಾಚಾರ, ಅತ್ಯಾಚಾರ, ವರದಕ್ಷಿಣೆಗಳಂತ ಸಾಮಾಜಿಕ ಪಿಡುಗುಗಳನ್ನು ಹೋಗಲಾಡಿಸಲು ಯುವಕರು ಮುಂದೆ ಬರಬೇಕು. ಶಿಕ್ಷಣದ ಜೊತೆ ದೇಶಪ್ರೇಮ, ಪರಿಸರ ಪ್ರೇಮ ಬೆಳೆಸಿ
ಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಯುವ ಜನತೆ ಸಮಯಪಾಲನೆ ಮತ್ತು ಶ್ರಮದಾನ ಮುಖಾಂತರ ಸ್ವಚ್ಛತಾಕಾರ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು. ಇಂದಿನ ಯುವ ಜನರಿಗೆ ರಾಷ್ಟ್ರೀಯತೆ ಹಾಗೂ ನೈತಿಕತೆಯನ್ನು ಪರಿಚಯಿ
ಸಲು, ಸೇವಾಮನೋಭಾವ, ರಾಷ್ಟ್ರಪ್ರೇಮ ಮೈಗೂಡಿಸುವಲ್ಲಿ ಎನ್‌ಎಸ್‌ಎಸ್‌ ಮಹತ್ವದ ಪಾತ್ರ ವಹಿಸುತ್ತಿದೆ’ ಎಂದರು.

ಸಂಸ್ಥೆಯ ಆಡಳಿತಾಧಿಕಾರಿ ಡಾ.ಕೆ.ಜಿ.ಪೂಜಾರಿ ಮಾತನಾಡಿ, ‘ಒಳ್ಳೆಯದನ್ನು ಮಾಡುವ ಮನಸ್ಸು ನಮ್ಮದಾಗಿರಬೇಕು. ಒಳ್ಳೆಯ ನಾಗರಿಕರಾಗಲು ಎನ್ಎಸ್‌ಎಸ್‌ ಸಹಕಾರಿಯಾಗಿದೆ. ಪ್ರತಿಯೊಬ್ಬರು ತಲಾ
ಒಂದು ಸಸಿ ನೆಡುವ ಮೂಲಕ ಪರಿಸರವನ್ನು ಬೆಳೆಸೋಣ, ಅದು ಮರವಾದಾಗ ಸಿಗುವ ಆನಂದ ಅಪಾರ’ ಎಂದರು.

ಪ್ರಾಚಾರ್ಯ ಡಾ.ಎಚ್.ಎಂ.ಮುಜಾವರ ಮಾತನಾಡಿದರು. ಭಾರತ ಸೇವಾದಳದ ಜಿಲ್ಲಾ ಘಟಕದ ನಾಗೇಶ ಡೋಣೂರ, ಕಲಾವಿದ ಸೋಮಶೇಖರ ರಾಠೋಡ, ಐಕ್ಯೂಎಸಿ ಸಂಯೋಜಕಿ ಡಾ.ಭಾರತಿ ಮಠ, ಆನಂದ ರಾಠೋಡ ಈ ಸಂದರ್ಭದಲ್ಲಿ ಇದ್ದರು.

ಎನ್‌ಎಸ್‌ಎಸ್‌ ಅಧಿಕಾರಿ ಪ್ರೊ.ಡಿ.ಬಿ.ಕೋಟಿ ಸ್ವಾಗತಿಸಿದರು. ಪ್ರೊ.ಸುಭಾಸಚಂದ್ರ ಕನ್ನೂರ ನಿರೂಪಿಸಿದರು.ಎನ್‌ಎಸ್‌ಎಸ್ ಅಧಿಕಾರಿ ಪ್ರೊ.ಐ.ಬಿ.ಚಿಪ್ಪಲಕಟ್ಟಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT