ಸೋಮವಾರ, ಜನವರಿ 20, 2020
27 °C

ವ್ಯಕ್ತಿ ಅಪಹರಣ: ಐವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿಕಾರಿಪುರ: ವ್ಯಕ್ತಿಯೊಬ್ಬರ ಅಪಹರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಭಾನುವಾರ ಬಂಧಿಸಿರುವ ಗ್ರಾಮಾಂತರ ಠಾಣೆ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ರೇಖಾ ಪಾಟೀಲ್, ಶಿವರಾಜ್, ಗೋಪಾಲ, ವಿಜಯಕುಮಾರ್, ಗಂಗಾಧರಪ್ಪ ಬಂಧಿತರು.

ಪ್ರಕರಣದ ವಿವರ:  ಈಸೂರು ಗ್ರಾಮದ ರೇಖಾ ಪಾಟೀಲ್ ಗ್ರಾಮದ ಬಸವರಾಜಪ್ಪ ಅವರಿಗೆ ₹ 16 ಲಕ್ಷ ನೀಡಬೇಕಾಗಿತ್ತು.  ಹಣ ನೀಡಲು ಸಾಧ್ಯವಾಗದ ಕಾರಣ ಬಸವರಾಜಪ್ಪ ಅವರನ್ನು ಅಪಹರಿಸಲು ರೇಖಾ ಸುಫಾರಿ ನೀಡಿದ್ದರು.

ಅಪಹರಣಕಾರರು ಜ. 1ರಂದು ನನ್ನನ್ನು ಕಾರಿನಲ್ಲಿ ಅಪಹರಿಸಿ ಸಾಗರ ತಾಲ್ಲೂಕಿನ ಕೊರಲಿಕೊಪ್ಪ ಗ್ರಾಮ ಸಮೀಪದ ಕಾಡಿಗೆ ಕರೆದುಕೊಂಡು ಹೋಗಿ ಮಾರಣಾಂತಿಕ ಹಲ್ಲೆ ನಡೆಸಿ 4 ಖಾಲಿ ಛಾಪಾಕಾಗದ ಮೇಲೆ ಸಹಿ ಪಡೆದಿದ್ದರು. ಹಲ್ಲೆ ಬಳಿಕ ಬಸವರಾಜಪ್ಪ ಮೃತಪಟ್ಟಿದ್ದಾರೆ ಎಂದು ಕಾಡಿನಲ್ಲಿ ಬಿಟ್ಟು ಹೋಗಿದ್ದರು. ಬಳಿಕ ಪತ್ನಿಗೆ ಕರೆ ಮಾಡಿದ ಬಸವರಾಜಪ್ಪ ವಿಷಯ ತಿಳಿಸಿದ್ದರು.

ಈ ಕುರಿತು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು