ಚಿಂಚೋಳಿ: ಪ್ರವಾಹದಲ್ಲಿ ಬುಧವಾರ ಸಿಲುಕಿದ ಯಾದಗಿರಿ ಜಿಲ್ಲಾಧಿಕಾರಿ ಕಚೇರಿಯ ಸಹಾಯಕರಾದ ತಹಶೀಲ್ದಾರ್ ಪಂಡಿತ ಬೀರಾದಾರ ಅವರ ರಕ್ಷಣೆಗೆ ಅಗ್ನಿಶಾಮಕ ದಳದವರೊಂದಿಗೆ ಕೈಜೋಡಿಸಿದ ಗಣಾಪುರದ ಜಾವೇದ್, ಭಕ್ತಂಪಳ್ಳಿಯ ರಘುರೆಡ್ಡಿ ಮತ್ತು ಅಗ್ನಿಶಾಮಕ ದಳದ ಆನಂದ ಅವರಿಗೆ ಪೊಲೀಸರು ತಲಾ ₹5 ಸಾವಿರನಗದು ಬಹುಮಾನ ನೀಡಿದ್ದಾರೆ.

ಪಂಡಿತ ಬಿರಾದಾರ ಅವರು ಪ್ರವಾಹದಲ್ಲಿ ಸಿಲುಕಿ ಮರವೇರಿ ಕುಳಿತಿದ್ದಾಗ ಅವರನ್ನು ರಕ್ಷಿಸಲು ಅಗ್ನಿಶಾಮಕ ದಳದ ಸಿಬ್ಬಂದಿಯೊಂದಿಗೆ ಹಗ್ಗ ಹಿಡಿದುಕೊಂಡು ಈಜುತ್ತ ಹೋಗಿ ಮರದಿಂದ ಕೆಳಗೆ ಇಳಿಸಿಕೊಂಡು ಬರುವ ಮೂಲಕ ಸಾಹಸ ಪ್ರದರ್ಶಿಸಿದ ಪ್ರಯುಕ್ತ ಮಿರಿಯಾಣ ಠಾಣೆಯ ಸಬ್ ಇನ್ಸ್ಪೆಕ್ಟರ್ ಸಂತೋಷ ರಾಠೋಡ್ ಬಹುಮಾನ ನೀಡಿದ್ದಾರೆ.

ಸಂತೋಷ ರಾಠೋಡ್ ನಗದು ಬಹುಮಾನ ಘೋಷಿಸಿದ್ದಲ್ಲದೆ ಡಿವೈಎಸ್ಪಿ ವೀರಭದ್ರಯ್ಯ ನೇತೃತ್ವದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಮಹಾಂತೇಶ ಪಾಟೀಲಮೂಲಕ ಯುವಕರಿಗೆ ವಿತರಿಸಿದರು.

ಸಾಹಸ ಪ್ರದರ್ಶಿಸಿದ ಯುವಕರನ್ನು ಶಾಸಕ ಡಾ.ಅವಿನಾಶ ಜಾಧವ ಗುರುವಾರ ತಾಲ್ಲೂಕಿನ ಕಲ್ಲೂರು ರೋರ್ ಗ್ರಾಮದಲ್ಲಿ ಸನ್ಮಾನಿಸಿ ಅಭಿನಂದಿಸಿದರು. ಉಪ ವಿಭಾಗಾಧಿಕಾರಿ ರಮೇಶ ಕೋಲಾರ, ತಹಶೀಲ್ದಾರ್ ಅರುಣಕುಮಾರ ಕುಲಕರ್ಣಿ, ಇಒ ಅನಿಲ ರಾಠೋಡ್, ಬಿಜೆಪಿ ಮುಖಂಡ ವಿಶ್ವನಾಥ ಈದಲಾಯಿ, ವೀರಾರೆಡ್ಡಿ ಪಾಟೀಲ, ಜಗದೀಶಸಿಂಗ್ ಠಾಕೂರ, ಶ್ರೀನಿವಾಸ ಚಿಂಚೋಳಿಕರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.