ಸೋಮವಾರ, ಮೇ 23, 2022
20 °C

ಇಂದಿನಿಂದ ವಿವಿಧೆಡೆ ವಿದ್ಯುತ್‌ ವ್ಯತ್ಯಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿದ್ಯುತ್ ಕೇಂದ್ರದಲ್ಲಿ ತುರ್ತು ಕಾರ್ಯನಿರ್ವಹಣೆ ಕೈಗೆತ್ತಿಕೊಂಡಿರುವುದರಿಂದ ಇದೇ 13ರಿಂದ 15ರವರೆಗೂ ನಗರದ ವಿವಿಧೆಡೆ ಬೆಳಿಗ್ಗೆ 10 ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.‌

ವ್ಯತ್ಯಯವಾಗುವ ಸ್ಥಳಗಳು (ಏ.13): ಬೇಗೂರು ಮುಖ್ಯರಸ್ತೆಯ ಸೇಂಟ್‌ ಫ್ರಾನ್ಸಿಸ್‌ ಶಾಲೆಯಿಂದ ತ್ಯಾಗರಾಜ ಕೋ ಆಪರೇಟಿವ್‌ ಬ್ಯಾಂಕ್‌, ನ್ಯೂ ಮೈಕೋ ಲೇಔಟ್‌ ಹಾಗೂ ಸುತ್ತಲಿನ ಪ್ರದೇಶ. ಬೇಗೂರು ಮುಖ್ಯರಸ್ತೆಯ ಹೊಂಗಸಂದ್ರ ಬಸ್‌ ನಿಲ್ದಾಣದಿಂದ ತ್ಯಾಗರಾಜ ಕೋ ಆಪರೇಟಿವ್‌ ಬ್ಯಾಂಕ್‌ ಮತ್ತು ಸುತ್ತಲಿನ ಪ್ರದೇಶ.

ಏ.14 ಮತ್ತು 15: ಬೇಗೂರು ಮುಖ್ಯರಸ್ತೆಯ ಹೊಂಗಸಂದ್ರ ಬಸ್‌ ನಿಲ್ದಾಣದಿಂದ ಶಾಸಕರ ನಿವಾಸ ಹಾಗೂ ಸುತ್ತಲಿನ ಪ್ರದೇಶ. ಹೊಂಗಸಂದ್ರ ಬಸ್‌ ನಿಲ್ದಾಣದಿಂದ ತ್ಯಾಗರಾಜ ಕೋ ಆಪರೇಟಿವ್‌ ಬ್ಯಾಂಕ್‌ ಮತ್ತು ಸುತ್ತಲಿನ ಪ್ರದೇಶ. ಬೇಗೂರು ಮುಖ್ಯರಸ್ತೆ, ಬೊಮ್ಮನಹಳ್ಳಿ ಸಿಗ್ನಲ್‌ನಿಂದ ಗ್ರೀನೇಜ್‌ ವಸತಿ ಸಮುಚ್ಚಯ ಹಾಗೂ ಸುತ್ತಲಿನ ಪ್ರದೇಶ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.