ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಾಯಣ: ನಾಳೆಯಿಂದ ಐದು ದಿನ ರಂಗೋತ್ಸವ

Last Updated 25 ಮಾರ್ಚ್ 2019, 12:37 IST
ಅಕ್ಷರ ಗಾತ್ರ

ಶಿವಮೊಗ್ಗ: ವಿಶ್ವರಂಗ ಭೂಮಿ ದಿನಾಚರಣೆ ಅಂಗವಾಗಿ ರಂಗಾಯಣ ಮಾರ್ಚ್‌ 27ರಿಂದ ಐದು ದಿನಗಳ ರಂಗೋತ್ಸವ, ಪಿ.ಲಂಕೇಶ್ ಅವರಿಗೆ ರಂಗನಮನ ಕಾರ್ಯಕ್ರಮ ಹಮ್ಮಿಕೊಂಡಿದೆ.

ಶಿವಮೊಗ್ಗ ರಂಗಾಯಣ ಹೊಸದಾಗಿ ಸಿದ್ಧಪಡಿಸಿರುವ ಮೂರು ನಾಟಕಗಳು ಸೇರಿ ಐದು ನಾಟಕಗಳ ಪ್ರದರ್ಶನ ಇರುತ್ತದೆ ಎಂದು ರಂಗಾಯಣದ ನಿರ್ದೇಶಕ ಎಂ.ಗಣೇಶ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

27ರಂದು ಪ್ರೊ.ಅರವಿಂದ ಮಾಲಗತ್ತಿ ಅವರ ಆತ್ಮಕಥೆ ಆಧಾರಿತ ಎಂ.ಗಣೇಶ್ ನಿರ್ದೇಶನದ `ಗೌರ್ಮೆಂಟ್ ಬ್ರಾಹ್ಮಣ’ 28ರಂದು ಬಂಗಾಳಿ ಮೂಲದ ಬಾದಲ್ ಸರ್ಕಾರ್ ಅವರ `ಮೆರವಣಿಗೆ’ ನಾಟಕ ಪ್ರದರ್ಶನವಿದೆ. ಈ ನಾಟಕವನ್ನು ಪಿ.ಗಂಗಾಧರ ಸ್ವಾಮಿ ಅವರು ನಿರ್ದೇಶಿಸಿದ್ದಾರೆ. 29ರಂದು ಮಣಿಪುರದ ಜಾಯ್ ಮೈಸ್ನಾಂ ನಿರ್ದೇಶನದ `ಇದಕ್ಕೆ ಕೊನೆ ಎಂದು?’ 30ರಂದು ಮಂಜುನಾಥ ಎಲ್. ಬಡಿಗೇರ್ ನಿರ್ದೇಶನದ ಕೆ.ವಿ.ಸುಬ್ಬಣ್ಣ ರಂಗಸಮೂಹ ಹೆಗ್ಗೋಡು ಅಭಿನಯದ `ಸಂದೇಹ ಸಾಮ್ರಾಜ್ಯ’, 31ರಂದು ಶ್ರೀನಿವಾಸ ವೈದ್ಯರ ಬರಹ ಆಧರಿತ ಪಾಶ್ವ ಸಂಗೀತ ನಾಟಕ ಪ್ರದರ್ಶನವಿದೆ. ಬಿ.ಪಿ.ಅರುಣ್ ಅವರು ಇದಕ್ಕೆ ರಂಗರೂಪ ನೀಡಿದ್ದಾರೆ. ಮೈಸೂರಿನ ರಂಗವಲ್ಲಿ ತಂಡ ನಾಟಕ ಅಭಿನಯಿಸಿದೆ ಎಂದು ವಿವರ ನೀಡಿದರು.

27ರಂದು ಸಂಜೆ 6.30ಕ್ಕೆ ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ ಜೋಗನ್ ಶಂಕರ್ ರಂಗೋತ್ಸವಕ್ಕೆ ಚಾಲನೆ ನೀಡುವರು. ಉದ್ಘಾಟಿಸುವರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಅರವಿಂದ ಮಾಲಗತ್ತಿ, ರಂಗನಿರ್ದೇಶಕ ಶ್ರೀಪಾದ ಭಟ್, ನಿವೃತ್ತ ಕುಲಸಚಿವ ಪ್ರೊ.ಶ್ರೀಕಂಠ ಕೂಡಿಗೆ, ಚಂದ್ರಶೇಖರ ಹಿರೇಗೋಣಿಗೆರೆ ಭಾಗವಹಿಸುವರು.

31ರಂದು ನಡೆಯುವ ಸಮಾರೋಪದಲ್ಲಿ ಸಾಹಿತಿ ಬಿ.ಚಂದ್ರೇಗೌಡ ಅವರ ಸಮಾರೋಪ ನುಡಿ ಇರುತ್ತದೆ. ರಂಗಕರ್ಮಿ ವೈದ್ಯ ಅವರು ಅನಿಸಿಕೆ ವ್ಯಕ್ತಪಡಿಸುವರು ಎಂದರು.

ರಂಗಾಯಣದ ಆಡಳಿತಾಧಿಕಾರಿ ಶಫಿ ಸಾದುದ್ದೀನ್, ರಂಗೋತ್ಸವದ ಸಂಚಾಲಕ ಕಾಂತೇಶ ಕದರಮಂಡಲಗಿ ಉಪಸ್ಥಿತಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT