ಕ್ರಿಯಾಶೀಲ ಸಂಸದರ ಆಯ್ಕೆಗೆ ವಿಎಚ್‌ಪಿ ಸಲಹೆ

ಬುಧವಾರ, ಏಪ್ರಿಲ್ 24, 2019
23 °C

ಕ್ರಿಯಾಶೀಲ ಸಂಸದರ ಆಯ್ಕೆಗೆ ವಿಎಚ್‌ಪಿ ಸಲಹೆ

Published:
Updated:

ಶಿವಮೊಗ್ಗ: ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬರೂ ಮತದಾನ ಮಾಡುವ ಮೂಲಕ ತಮ್ಮ ಕರ್ತವ್ಯ ನಿರ್ವಹಿಸಬೇಕು ಎಂದು ವಿಶ್ವ ಹಿಂದೂ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ್ ಬಾಬು ಜಾದವ್ ಸಲಹೆ ನೀಡಿದರು.

ಮತದಾನ ಪವಿತ್ರವಾದುದು. ಮತದಾನ ಜಾಗೃತಿಗೆ ಪ್ರತಿಯೊಬ್ಬರೂ ಸಹಕರಿಸಬೇಕು ಮತ್ತು ಪ್ರೇರೇಪಿಸಬೇಕು. ಆಡಳಿತ ಯಂತ್ರ ಸದೃಢವಾಗಿ ಮುನ್ನಡೆಸಲು ಕ್ರಿಯಾಶೀಲ ಸಂಸದರ ಆಯ್ಕೆ ಮಾಡಬೇಕು ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಕೋರಿದರು.

ಭಾರತದ ರಾಷ್ಟ್ರೀಯತೆ ಎತ್ತಿ ಹಿಡಿಯುವ, ದೇಶದ ಸಂಸ್ಕೃತಿ ಶ್ರೀಮಂತಗೊಳಿಸುವ ಸರ್ಕಾರದ ಆವಶ್ಯಕತೆ ಇದೆ. ಭಯೋತ್ಪಾದನೆ ತಡೆಗಟ್ಟಬೇಕು, ಮತಾಂತರ ದೂರವಾಗಬೇಕು. ಗೋ ಹತ್ಯೆ ನಿಷೇಧಿಸಬೇಕು. ರೈತರ ಸಮಸ್ಯೆಗಳು ನಿವಾರಣೆಯಾಗಬೇಕು.ಯುವಕರಿಗೆ ಅವಕಾಶ ಸಿಗಬೇಕು. ಮುಖ್ಯವಾಗಿ ಕಾಶ್ಮೀರದಲ್ಲಿ ಪ್ರತ್ಯೆಕತಾವಾದ ಮಟ್ಟ ಹಾಕಬೇಕು. ಈ ಎಲ್ಲ ಆದರ್ಶಗಳನ್ನು ಯಾವ ಪಕ್ಷಗಳು ಮಾಡುತ್ತಾರೋ ಅವರನ್ನು ವಿಶ್ವ ಹಿಂದು ಪರಿಷತ್‌ ಬೆಂಬಲಿಸುತ್ತದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪರಿಷತ್ ಪ್ರಮುಖರಾದ ನಟರಾಜ್, ನಾರಾಯಣ್, ಚಂದ್ರಕಾಂತ್, ಮಮತಾ ಪ್ರಭಾಕರ್, ಮಮತಾ ಸತೀಶ್, ಶಾರದಾ, ಶ್ರೀಧರ್, ಆನಂದರಾವ್, ರಾಜೇಶ್ ಗೌಡ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !