ಸೋಮವಾರ, ಫೆಬ್ರವರಿ 24, 2020
19 °C

ಪಿಯುನಿಂದಲೇ ಸ್ಪರ್ಧಾ ಪರೀಕ್ಷೆಗೆ ಸಿದ್ಧತೆ: ತೇಜಸ್‌ ಸಾಥ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ತೇಜಸ್ ಟ್ರಸ್ಟ್ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪಿಯು, ಪದವಿ ಶಿಕ್ಷಣಕ್ಕೆ ಅವಕಾಶ ಮಾಡಿಕೊಟ್ಟಿದೆ. ಯುಪಿಎಸ್‌ಸಿ ಪರೀಕ್ಷೆ ಎದುರಿಸಲು ಎರಡು ವರ್ಷ ಉಚಿತ ತರಬೇತಿ ನೀಡುತ್ತಿದೆ ಎಂದು ಟ್ರಸ್ಟಿ ಎ.ಜೆ.ರಾಮಚಂದ್ರ ತಿಳಿಸಿದರು.

ಟ್ರಸ್ಟ್ 5 ವರ್ಷಗಳಿಂದ ತರಬೇತಿ ನೀಡಲಾಗುತ್ತಿದೆ. ದೇಶದ ಸೇವೆಯಲ್ಲಿ ದಕ್ಷ, ಪ್ರ್ರಾಮಾಣಿಕ ಮತ್ತು ದೇಶನಿಷ್ಠ ಅಧಿಕಾರಿಗಳು ಇರಬೇಕು ಎಂಬ ಧ್ಯೇಯ ಇಟ್ಟುಕೊಂಡು ಈ ಯೋಜನೆ ಕೈಗೊಂಡಿದೆ. ಆಯ್ಕೆಯಾದ ಮಕ್ಕಳಿಗೆ ಉಚಿತವಾಗಿ ಶಿಕ್ಷಣ, ತರಬೇತಿ, ಊಟ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಪಿಯು ಹಾಗೂ ಪದವಿ ಶಿಕ್ಷಣವನ್ನು ಪ್ರತಿಷ್ಠಿತ ಕಾಲೇಜುಗಳಲ್ಲಿ ಕೊಡಿಸಲಾಗುತ್ತದೆ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಪ್ರತಿವರ್ಷ 30 ವಿದ್ಯಾರ್ಥಿಗಳಿಗೆ ಅರ್ಹತೆಯ ಆಧಾರದ ಮೇಲೆ ಅವಕಾಶ ಕಲ್ಪಿಸಲಾಗುತ್ತಿದೆ. ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಪ್ರವೇಶ ಪರೀಕ್ಷೆ ನಡೆಸಲಾಗುತ್ತಿದೆ. ಅರ್ಜಿ ಸಲ್ಲಿಸಲು ಡಿ.20 ಕೊನೆಯ ದಿನ. ಜ.5ರಂದು ಲಿಖಿತ ಪರೀಕ್ಷೆ. ಮಾಹಿತಿಗೆ ತೇಜಸ್ ಪ್ರಕಲ್ಪ, ವಿಕಾಸ ಪ್ರೌಢಶಾಲೆ, ಆಲ್ಕೋಳ, ಶಿವಮೊಗ್ಗ ಇಲ್ಲಿಗೆ ಭೇಟಿ ನೀಡಬಹುದು. 92433 14305 ಅಥವಾ 94493 61321 ಸಂಪರ್ಕಿಸಬಹುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ವೈ.ವಿ.ವಿ.ಜೋಶಿ, ಮಮತಾ ಸುಧೀಂದ್ರ, ರಮೇಶ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)