ಶನಿವಾರ, ಜನವರಿ 18, 2020
20 °C

ರೈತ ಚಳವಳಿಗೆ ಹೊಸ ರೂಪ: ಪ್ರತಿ ತಾಲ್ಲೂಕಲ್ಲೂ ಯುವಕರ ತಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ರೈತ ಚಳವಳಿಗೆ ಹೊಸ ರೂಪ ಕೊಡಲು ಪ್ರತಿ ತಾಲ್ಲೂಕಿನಲ್ಲೂ 100 ಯುವಕರ ತಂಡ ರಚಿಸಲಾಗುತ್ತಿದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.

ಇಂದಿಗೂ ರೈತರ ಬವಣೆ ತಪ್ಪಿಲ್ಲ, ವೈಜ್ಞಾನಕ ಬೆಲೆ ನಿರೀಕ್ಷೆ ಈಡೇರಿಲ್ಲ. ವಿದೇಶಿ ಒಪ್ಪಂದಗಳು ರೈತರ ಕುತ್ತಿಗೆ ಹಿಚುಕುತ್ತಿವೆ. ಇಂಡೊ–ಅಮೆರಿಕ ಒಪ್ಪಂದ ಮಾಡಿಕೊಳ್ಳಬಾರದು. ಬೀಜ ಕಾಯ್ದೆಯಲ್ಲಿ ರೈತರ ಹಕ್ಕು ರಕ್ಷಿಸಬೇಕು. ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಬೇಕು. ಇಂತಹ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಡಿ.23 ರಂದು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೆ.ಎಂ.ದೊಡ್ಡಿಯ ಭಾರತೀ ನಗರದಲ್ಲಿ ರೈತ ಚೇತನ ಎನ್.ಡಿ.ಸುಂದರೇಶ್, ಕೆ.ಎಸ್.ಪುಟ್ಟಣ್ಣಯ್ಯ ಅವರ ನೆನಪಿನ ದಿನಾಚರಣೆ, ಕಾಯಕ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಕೆ.ಎಸ್.ಪುಟ್ಟಣ್ಣಯ್ಯ, ಎನ್.ಡಿ.ಸುಂದರೇಶ್ ರೈತ ಚೇತನಗಳು. ರೈತ ಹೋರಾಟಕ್ಕೆ, ಚಳವಳಿ ಕಟ್ಟಿ ಬೆಳೆಸಲು ಅವರ ಕೊಡುಗೆ ಅಪಾರವಾಗಿದೆ. ಡಿ.23 ವಿಶ್ವ ರೈತ ದಿನಾಚರಣೆ, ಚೌದರಿ ಚರಣ್ ಸಿಂಗ್ ಜನ್ಮದಿನ. ಈ ಕಾರ್ಯಕ್ರಮದಲ್ಲಿ ಸ್ವರಾಜ್ ಇಂಡಿಯಾ ಪಕ್ಷ ಭಾಗವಹಿಸುವುದು ವಿಶೇಷ. ಅಂದು ಅಂತರರಾಷ್ಟ್ರೀಯ ಒಪ್ಪಂದಗಳ ವಿರುದ್ದ ಹೋರಾಟ ರೂಪಿಸಲು ನಿರ್ಣಯ ಕೈಗೊಳ್ಳಲಾಗುವುದು. ರೈತ ಚಳವಳಿಗೆ ಹೊಸ ರೂಪ ಕೊಡುವ ಪ್ರಯತ್ನ ಮಾಡಲಾಗುವುದು. 10 ಸಾವಿರಕ್ಕೂ ಹೆಚ್ಚು ರೈತರು ಭಾಗವಹಿಸುವರು ಎಂದು ವಿವರ ನೀಡಿದರು.

ಬ್ರೆಜಿಲ್ ಪ್ರಧಾನಿ ಗಣರಾಜ್ಯೋತ್ಸವಕ್ಕೆ ಬರಲು ರೈತರ ವಿರೋಧವಿದೆ.  ಡಿ.21ರಿಂದ 27ರವರೆಗೆ ದೇಶದ ಎಲ್ಲೆಡೆ  ಪ್ರತಿಭಟನೆಗಳು ನಡೆಯಲಿವೆ. ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಿ, ಧಾನ ಮಂತ್ರಿಗೆ ಮನವಿ ಮಾಡಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಗಳ ಮುಖಂಡರಾದ ಕೆ.ಪಿ.ಶ್ರೀಪಾಲ್, ನುಲೆನೂರು ಶಂಕರಪ್ಪ, ರಾಮಸ್ವಾಮಿ, ರವಿಕುಮಾರ್ ಬಲ್ಲೂರ್, ಎನ್.ಡಿ.ವಸಂತಕುಮಾರ್, ವಾಮದೇವಗೌಡ, ಹೇಮ, ರವಿಕಿರಣ್ ಇದ್ದರು.  

ಪ್ರತಿಕ್ರಿಯಿಸಿ (+)