ಶುಕ್ರವಾರ, ಫೆಬ್ರವರಿ 21, 2020
28 °C

ನಾಳೆ ಸಂಕೇತಿ ಸಂಘದ ಅಮೃತ ಮಹೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಮೈಸೂರಿನ ಸಂಕೇತಿ ಸಂಘ ಹೊಸಳ್ಳಿಯ ಗಮಕ ಭವನದಲ್ಲಿ ಫೆ.9ರಂದು ಅಮೃತ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದೆ. 

ಸಂಕೇತಿ ಒಂದು ಪುಟ್ಟ ಸಮುದಾಯ. ಇಡೀ ವಿಶ್ವದಲ್ಲೇ 30 ಸಾವಿರ ಜನ ಇದ್ದಾರೆ. ಸಂಸ್ಕೃತ, ವೇದಾಂತ, ಗಮಕ ಮತ್ತಿತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಸಂಘಕ್ಕೆ ಈಗ ಅಮೃತ ಮಹೋತ್ಸವದ ಸಂಭ್ರಮ ಎಂದು ಸಂಘದ ಉಪಾಧ್ಯಕ್ಷ ಎಚ್.ಕೆ.ಕೇಶವಮೂರ್ತಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಅಂದು ವಿಚಾರ ಗೋಷ್ಠಿಗಳು, ಸಾಧಕರಿಗೆ ಸನ್ಮಾನ, ಪುಸ್ತಕ ಬಿಡುಗಡೆ, ಸಂಘದ ವೀಡಿಯೊ ಪ್ರದರ್ಶನ ಮತ್ತಿತರ ಕಾರ್ಯಕ್ರಮ ಆಯೋಜಿಸಲಾಗಿದೆ. ಖ್ಯಾತ ಗಮಕಿ ಎಚ್.ಆರ್.ಕೇಶವಮೂರ್ತಿ ಕಾರ್ಯಕ್ರಮ ಉದ್ಘಾಟಿಸುವರು. ವಿಧಾನ ಪರಿಷತ್‌ ಮಾಜಿ ಸದಸ್ಯ ಎಂ.ಬಿ.ಭಾನುಪ್ರಕಾಶ್ ಉಪಸ್ಥಿತರಿರುವರು. ಕಲಾವಿದ ಎಚ್.ಕೆ.ವೆಂಕಟರಾಮು ಬಹುಮಾನ ವಿತರಿಸುವರು. ಸಂಘದ ಅಧ್ಯಕ್ಷ ಎಂ.ಎನ್.ಅನಂತ್ ಅಧ್ಯಕ್ಷತೆ ವಹಿಸುವರು ಎಂದು ವಿವರ ನೀಡಿದರು.

ಬೆಳಿಗ್ಗೆ 7ಕ್ಕೆ ಗಂಗಾಪೂಜೆ ಕಾರ್ಯಕ್ರಮ. 10ಕ್ಕೆ ಸಭಾ ಕಾರ್ಯಕ್ರಮ ಇರುತ್ತದೆ. ಎಸ್.ಎಲ್.ಬೈರಪ್ಪ ಅವರ ಧರ್ಮಶ್ರೀ ಕಾದಂಬರಿಯ ಸಂಕೇತಿ ಅವತರಣಿಕೆ ಹಾಗೂ ಮತ್ತೂರು ಸುಬ್ಬಣ್ಣ ಅವರ ಹಳ್ಳಿಸುಬ್ಬ ಪುಸ್ತಕ ಬಿಡುಗಡೆಯಾಗಲಿವೆ. ಮಧ್ಯಾಹ್ನದ ಗೋಷ್ಠಿಯಲ್ಲಿ ‘ಸಂಕೇತಿಗಳು ಮತ್ತು ಸ್ವ-ಉದ್ಯೋಗ’ ಕುರಿತು ವಿಜ್ಞಾನಿ ಡಾ.ಎಚ್.ಎಸ್.ಸುಬ್ರಮಣ್ಯ, ಕೈಗಾರಿಕೋದ್ಯಮಿ ಎಲ್.ಎಚ್.ಅರವಿಂದ ಉಪನ್ಯಾಸ ನೀಡುವರು. 2ನೇ ಗೋಷ್ಠಿಯಲ್ಲಿ ‘ಸಂಕೇತಿತನ ಉಳಿಸಿಕೊಳ್ಳುವ ಸವಾಲು’ ಕುರಿತು ಎಲ್.ವಿ.ಸೂರ್ಯನಾರಾಯಣ, ಎಚ್.ಡಿ.ಆನಂದಕುಮಾರ ಉಪನ್ಯಾಸ ನೀಡುವರು. ಸಂಘಕ್ಕೆ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ 21 ಗಣ್ಯರನ್ನು ಸನ್ಮಾನಿಸಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪದ್ಮಾ ದಿವಾಕರ್, ಎಚ್.ಎನ್.ಲಕ್ಷ್ಮೀಕಾಂತ್, ಶ್ರೀನಿವಾಸ್, ಆನಂದ್, ಹರೀಶ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು