ಶನಿವಾರ, ಸೆಪ್ಟೆಂಬರ್ 18, 2021
28 °C
ಕೃಷ್ಣಾ ಜಲನಯನ ಪ್ರದೇಶದಲ್ಲಿ ಮಳೆ, ಮತ್ತಷ್ಟು ಹೊರ ಹರಿವು ಹೆಚ್ಚಳ ಸಾಧ್ಯತೆ

ಹುಣಸಗಿ: ಕೃಷ್ಣಾ ನದಿಗೆ 1.36 ಲಕ್ಷ ಕ್ಯುಸೆಕ್‌ ನೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಣಸಗಿ: ತಾಲ್ಲೂಕಿನ ನಾರಾಯಣಪುರ ಬಸವಸಾಗರ ಜಲಾಶಯದಿಂದ 22 ಕ್ರಸ್ಟ್‌ ಗೇಟುಗಳ ಮೂಲಕ ಮಂಗಳವಾರ ರಾತ್ರಿಯಿಂದ 1.36 ಲಕ್ಷ ಕ್ಯುಸೆಕ್‌ ನೀರು ಕೃಷ್ಣಾ ನದಿಗೆ ಹರಿಸಲಾಗುತ್ತಿದೆ.

90,000 ಸಾವಿರ ಕ್ಯುಸೆಕ್‌ ಜಲಾಶಯಕ್ಕೆ ಒಳಹರಿವಿದ್ದರೆ 1,36,700 ಕ್ಯುಸೆಕ್‌ ಕೃಷ್ಣಾ ನದಿಗೆ, 6,000 ಕ್ಯುಸೆಕ್‌ ಜಲವಿದ್ಯುತ್‌ಗೆ, 4,500 ಕ್ಯುಸೆಕ್ ನೀರು ಕಾಲುವೆಗೆ ಹರಿಸಲಾಗುತ್ತಿದೆ.

ಕಳೆದ ಒಂದು ವಾರದಿಂದ ಕೃಷ್ಣಾ ಜಲನಯನ ಪ್ರದೇಶದಲ್ಲಿ ಮಳೆಯಾಗುತ್ತಿದ್ದು, ಇದರಿಂದ ಜಲಾಶಯಕ್ಕೆ ನೀರಿನ ಪ್ರಮಾಣ ಹೆಚ್ಚುತ್ತಿದೆ. ಪ್ರತಿ ಗಂಟೆಗೊಮ್ಮೆ ನೀರಿನ ಹರಿವಿನ ಪ್ರಮಾಣ ಹೆಚ್ಚಳವಾಗುತ್ತಿದೆ.

ಗರಿಷ್ಠ ಮಟ್ಟ 492.25 ಮೀಟರ್‌ ಇದ್ದು, 491.72 ಮೀಟರ್‌ ಕಾಯ್ದುಕೊಂಡು ಹೆಚ್ಚಿನ ನೀರನ್ನು ನದಿಗೆ ಹರಿಸಲಾಗುತ್ತಿದೆ. ಅಲ್ಲದೇ 1.80 ಲಕ್ಷ ಕ್ಯುಸೆಕ್‌ ನೀರು ತಲುಪುವ ಸಾಧ್ಯತೆ ಇದೆ ಜಲಾಶಯದ ಮೂಲಗಳು ತಿಳಿಸಿವೆ.

ಜನ–ಜಾನುವಾರು ನದಿಗೆ ಇಳಿದಂತೆ ಎಚ್ಚರಿಕೆಯನ್ನು ನೀಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು