ಬುಧವಾರ, ಜನವರಿ 22, 2020
18 °C
ಬೀದಿಕಾಮಣ್ಣರಿಗೆ ಅಂಕುಶ

ರಾಯಚೂರು: ಓಬವ್ವ ಪಡೆಯಿಂದ ಇಬ್ಬರು ಬೀದಿ ಕಾಮಣ್ಣರ ಸೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಮಹಿಳೆಯರ ಸುರಕ್ಷತೆಗಾಗಿ ರಚನೆಯಾದ ಓಬವ್ವ ಮಹಿಳಾ ಪೊಲೀಸ್ ಪಡೆಯ ಸಿಬ್ಬಂದಿ ಸೋಮವಾರ ರಾತ್ರಿ ಕಾರ್ಯಾಚರಣೆ ನಡೆಸಿ, ಯುವತಿಯರನ್ನು ಚುಡಾಯಿಸುತ್ತಿದ್ದ ಇಬ್ಬರು ಯುವಕರನ್ನು ವಶಕ್ಕೆ ಪಡೆದಿದ್ದಾರೆ.

ನಗರದ‌ ಬಂಗಿಕುಂಟಾ ಮಾರ್ಗದಲ್ಲಿ ಯುವತಿಯೊಬ್ಬಳನ್ನು ಪೀಡಿಸಿ, ಸ್ನೇಹಿತೆಯ ಮೊಬೈಲ್ ಸಂಖ್ಯೆ ಕೊಡುವಂತೆ ಉಪ್ಪಾರವಾಡಿಯ ತಾರಾನಾಥ ಒತ್ತಾಯಿಸುತ್ತಿದ್ದ. ಇದನ್ನು ಗಮನಿಸಿ ಸಾರ್ವಜನಿಕರು ಓಬವ್ವ ಪಡೆಗೆ ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕೆ ಧಾವಿಸಿ ಯುವಕನನ್ನು ವಶಕ್ಕೆ ಪಡೆಯಲಾಯಿತು.

ನಗರೇಶ್ವರ ದೇವಸ್ಥಾನದ ಹತ್ತಿರ ವಿವೇಕಾನಂದ ವೃತ್ತದ ಮಾರ್ಗದಲ್ಲಿ ಹೋಗುವ ಯುವತಿಯರಿಗೆ ಶಿಳ್ಳೆ ಹೊಡೆದು ಕಾಟ ನೀಡುತ್ತಿದ್ದ ಮಹಾಂತೇಶನನ್ನು ಓಬವ್ವ ಪಡೆ ವಶಕ್ಕೆ ಪಡೆದಿದೆ. ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು