ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಮತ ಎಣಿಕೆಗೆ 352 ಸಿಬ್ಬಂದಿ, ಭದ್ರತೆಗೆ 500 ಪೊಲೀಸರು

ಎಲ್‌ವಿಡಿ ಕಾಲೇಜು, ಎಸ್‌ಆರ್‌ಪಿಎಸ್‌ ಪಪೂ ಕಾಲೇಜಿನಲ್ಲಿ ಮತಗಳ ಎಣಿಕೆ
Last Updated 22 ಮೇ 2019, 12:10 IST
ಅಕ್ಷರ ಗಾತ್ರ

ರಾಯಚೂರು: ಎಂಟು ವಿಧಾನಸಭೆ ಕ್ಷೇತ್ರಗಳನ್ನು ಒಳಗೊಂಡ ರಾಯಚೂರು ಲೋಕಸಭೆ ಕ್ಷೇತ್ರಕ್ಕೆ ನಡೆದ ಮತದಾನದ ಮತಗಳ ಎಣಿಕೆ ಕಾರ್ಯ ಮೇ 23 ರಂದು ಬೆಳಿಗ್ಗೆ 8 ಗಂಟೆಗೆ ಆರಂಭವಾಲಿದೆ. 352 ಸಿಬ್ಬಂದಿಯನ್ನು ಮತಗಳ ಎಣಿಕೆಗೆ ಹಾಗೂ 500 ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.

ಬುಧವಾರ ಈ ಕುರಿತು ಮಾಹಿತಿ ನೀಡಿದ ಜಿಲ್ಲಾ ಚುನಾವಣಾಧಿಕಾರಿ ಶರತ್‌ ಬಿ., ಮತಗಳ ಎಣಿಕೆಗೆ ಸಂಪೂರ್ಣ ಸಿದ್ದತೆ ಮಾಡಿಕೊಳ್ಳಲಾಗಿದೆ. ಕ್ಷೇತ್ರದಲ್ಲಿ ಒಟ್ಟು 19,27,758 ಮತದಾರರಿದ್ದು, 11,15,886 ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಇದರಲ್ಲಿ 5,70,963 ಮಂದಿ ಪುರುಷರು 5,44,914 ಮಂದಿ ಮಹಿಳೆಯರು ಹಾಗೂ 9 ಇತರೆ ಮತದಾರರು ಇದ್ದಾರೆ ಎಂದರು.

ಮತ ಎಣಿಕೆಗಾಗಿ ಒಟ್ಟು 9 ಕೊಠಡಿಗಳನ್ನು ಕಾಯ್ದಿರಿಸಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 14 ಟೇಬಲ್‍ಗಳನ್ನು ಮತ ಎಣಿಕೆಗಾಗಿ ವ್ಯವಸ್ಥೆ ಮಾಡಲಾಗಿದೆ. ಮೊದಲಿಗೆ ಅಂಚೆ ಮತಗಳನ್ನು, ನಂತರ ಸರ್ವಿಸ್ ವೋಟರ್‌ಗಳನ್ನು (ಇಟಿಪಿಬಿಎಸ್) ಚುನಾವಣಾಧಿಕಾರಿಗಳ ಸಮ್ಮುಖದಲ್ಲಿ ತಂತ್ರಾಶದಲ್ಲಿ ಮತ ಎಣಿಕೆ ಮಾಡಲಾಗುವುದು. ವಿಧಾನಸಭಾ ಕ್ಷೇತ್ರವಾರು 5 ಮತಗಟ್ಟೆಗಳನ್ನು ರ್‍ಯಾಂಡಮ್ ಆಗಿ ಆಯ್ಕೆ ಮಾಡಿ ಅಭ್ಯರ್ಥಿಗಳ/ ಏಜೆಂಟ್‍ಗಳ ಸಮಕ್ಷಮದಲ್ಲಿ ವಿವಿಪ್ಯಾಟ್ ಸ್ಲಿಪ್‍ಗಳನ್ನು ಎಣಿಕೆ ಮಾಡಲಾಗುವುದು. ಮತ ಎಣಿಕೆಗಾಗಿ ಒಟ್ಟು 352 ಮೇಲ್ವಿಚಾರಕರು ಹಾಗೂ ಸಹಾಯಕರನ್ನು ನೇಮಕ ಮಾಡಲಾಗಿದೆ. 181 ಮೈಕ್ರೋ ವೀಕ್ಷಕರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.

ಪ್ರತಿಯೊಂದು ಸುತ್ತಿನಲ್ಲೂ ಮೈಕ್ರೋ ವೀಕ್ಷಕರು ಎರಡು ಕಂಟ್ರೋಲ್ ಯೂನಿಟ್‍ನ್ನು ಆರಿಸಿಕೊಂಡು ಮರು ಪರೀಶಿಲನೆ ಮಾಡುತ್ತಾರೆ. ಪ್ರತಿ ಸುತ್ತು ಮುಗಿದ ನಂತರ ಮಾಹಿತಿಯನ್ನು ಸಾಫ್ಟ್‍ವೇರ್‍ನಲ್ಲಿ ಆಪ್‍ಡೇಟ್ ಮಾಡಲಾಗುತ್ತದೆ. ಒಟ್ಟಾರೆ 23 ಸುತ್ತುಗಳ ಮತ ಎಣಿಕೆ ಕಾರ್ಯ ಮಾಡಲಾಗುತ್ತದೆ. ಮತ ಎಣಿಕೆಗಾಗಿ ನಿಯೋಜಿಸಲಾಗಿರುವ ಮೇಲ್ವಿಚಾರಕರು ಮತ್ತು ಸಹಾಯಕ ಮೇಲ್ವಿಚಾರಕರು ಚುನಾವಣಾ ಕಾರ್ಯದಲ್ಲಿ ಭಾಗವಹಿಸುತ್ತಾರೆ. ಈಗಾಗಲೇ ಅವರಿಗೆ ತರಬೇತಿ ನೀಡಲಾಗಿದೆ. ಅಂಚೆ ಮತಗಳನ್ನು ಸ್ವೀಕರಿಸಲು ಮತ ಎಣಿಕೆ ಪ್ರಾರಂಭವಾಗುವ ಮುನ್ನ ಅಂದರೆ ಮೇ.23ರ ಬೆಳಿಗ್ಗೆ 7.59 ನಿಮಿಷದವರೆಗೆ ಅವಕಾಶವಿದೆ. ಇದೂವರೆಗೆ ಅಂದಾಜು 2000 ಅಂಚೆ ಮತಗಳು ಸ್ವೀಕೃತಿಯಾಗಿವೆ ಎಂದು ಹೇಳಿದರು.

ಚುನಾವಣಾ ಆಯೋಗದ ವತಿಯಿಂದ ಸುರಪೂರ, ಶಹಾಪೂರ, ಯಾದಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತ ಎಣಿಕೆ ವೀಕ್ಷಕರಾಗಿ ಶೈಲಾ ಎ. ಮೊ.9820747298, ರಾಯಚೂರು ಗ್ರಾಮೀಣ, ರಾಯಚೂರು ನಗರ ಮತ್ತು ಮಾನವಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತ ಎಣಿಕೆ ವೀಕ್ಷಕರಾಗಿ ಸಚೀಂದ್ರ ಪ್ರತಾಪ್ ಸಿಂಗ್, ಮೊ.9422885511, ದೇವದುರ್ಗ ಮತ್ತು ಲಿಂಗಸೂಗೂರು ವಿಧಾನ ಸಭಾ ಕ್ಷೇತ್ರದ ಮತ ಎಣಿಕೆ ವೀಕ್ಷಕರಾಗಿ ಸಾಸೀಮ್ ಕುಮಾರ ಬರಾಯಿ ಮೊ.9433553964 ನೇಮಕ ಮಾಡಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಿಶೋರ್ ಬಾಬು, ಚುನಾವಣಾ ವೀಕ್ಷಕರಾದ ಶೈಲಾ.ಎ., ಸಚೀಂದ್ರ ಪ್ರತಾಪ್ ಸಿಂಗ್ ಸಾಸೀಮ್ ಕುಮಾರ ಬರಾಯಿ, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಅವರು ಮತ ಎಣಿಕಾ ಕೇಂದ್ರದ ಸಿದ್ದತೆಗಳ ಕುರಿತು ಪರಿಶೀಲನೆ ನಡೆಸಿದರು.

ಸೂಕ್ತ ಬಂದೋಬಸ್ತ್‌ ವ್ಯವಸ್ಥೆ

ಮತ ಎಣಿಕೆ ಕಾರ್ಯ ಸುಗಮವಾಗಿ ನಡೆಯಲು ಸೂಕ್ತ ಬಂದೋಬಸ್ತ್‌ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ. ಕಿಶೋರಬಾಬು ತಿಳಿಸಿದರು.

ಇದಕ್ಕಾಗಿ 500 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಮೂವರು ಡಿವೈಎಸ್‌ಪಿ, 18 ಸಿಪಿಐಗಳು, 33 ಪಿಎಸ್‌ಐಗಳು, ಎರಡು ಕೆಎಸ್‌ಆರ್‌ಪಿ ತಂಡಗಳು ಮತ್ತು ಒಂದು ಜಿಲ್ಲಾ ಮೀಸಲು ತಂಡವು ಭದ್ರತೆ ಕಾರ್ಯ ಕೈಗೊಳ್ಳುವರು.

ಯಾವುದೇ ಅಹಿತಕರ ಘಟನೆಗಳು ಆಗದಂತೆ ಮುನ್ನಚ್ಚರಿಕೆ ವಹಿಸಲಾಗುತ್ತಿದ್ದು, ಸ್ಥಳದಲ್ಲಿ ಅಗ್ನಿಶಾಮಕ ದಳ, ಆ್ಯಂಬುಲೆನ್ಸ್‌ ಇರಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT