ಸರ್ವೋತ್ತಮ ಸೇವಾ ಪ್ರಶಸ್ತಿ: ಆರು ನೌಕರರು ಆಯ್ಕೆ

7

ಸರ್ವೋತ್ತಮ ಸೇವಾ ಪ್ರಶಸ್ತಿ: ಆರು ನೌಕರರು ಆಯ್ಕೆ

Published:
Updated:

ರಾಯಚೂರು: ಸರ್ವೋತ್ತಮ ಸೇವಾ ಪ್ರಶಸ್ತಿಗೆ ಈ ವರ್ಷ ಜಿಲ್ಲಾ ಸಮಿತಿಯು ಆರು ಸರ್ಕಾರಿ ನೌಕರರನ್ನು ಆಯ್ಕೆ ಮಾಡಿದ್ದು, ಜನವರಿ 26 ಗಣರಾಜ್ಯೋತ್ಸವ ದಿನದಂದು ನಡೆಯುವ ಸಮಾರಂಭದಲ್ಲಿ ಎಲ್ಲರಿಗೂ ಪ್ರಶಸ್ತಿ ಪತ್ರ ಮತ್ತು ತಲಾ ₹10 ಸಾವಿರ ನಗದು ಬಹುಮಾನ ನೀಡಿ ಗೌರವಿಸಲಾಗುತ್ತದೆ ಎಂದು ಜಿಲ್ಲಾಡಳಿತವು ತಿಳಿಸಿದೆ.

ಜಿಲ್ಲಾ ಅಂಗವಿಕಲರ ಕಲ್ಯಾಣ ಇಲಾಖೆಯ ಅಧಿಕಾರಿ ಶ್ರೀದೇವಿ, ಮಾನ್ವಿ ತಾಲ್ಲೂಕು ಬೆಂಚಮರಡಿ ಗ್ರಾಮ ಲೆಕ್ಕಾಧಿಕಾರಿ ಅನಿತಾ, ಮಾನ್ವಿ ತಾಲ್ಲೂಕು ಹಿರೇಕೋಟ್ನೆಕಲ್‌ ವ್ಯಾಪ್ತಿಯ ಸಿಡಿಪಿಒ ಮಲ್ಲವ್ವ ರಾಯಕೊಪ್ಪ, ಸಿಂಧನೂರು ತಾಲ್ಲೂಕು ಆರ್‌ಎಚ್‌ ಕ್ಯಾಂಪ್‌–1 ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವಪ್ಪ, ರಾಯಚೂರು ಜಿಲ್ಲಾಧಿಕಾರಿ ಕಾರು ಚಾಲಕ ಪರಶುರಾಮ್‌ ಮತ್ತು ದೇವದುರ್ಗ ತಾಲ್ಲೂಕು ಗಲಗ ಎಎನ್ಎಂ ಮಮ್ತಾಜ್‌ ಬೇಗಂ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಬೆಳೆಸಾಲ ಮನ್ನಾ ಯೋಜನೆಯಡಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿ ಗಮನ ಸೆಳೆದಿರುವ ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ ರಂಗನಾಥ ನೂಲಿಕರ್‌ ಮತ್ತು ಸಿಂಧನೂರಿನ ಸಿಡಿಒ ಗುರುಪ್ರಸಾದ್‌ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಗುತ್ತದೆ ಎಂದು ತಿಳಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !