ಶುಕ್ರವಾರ, ಅಕ್ಟೋಬರ್ 30, 2020
23 °C

ರಾಯಚೂರು: ಭಾರಿ ಮಳೆಗೆ 68 ಮನೆಗಳು ಭಾಗಶಃ ಕುಸಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಕ್ತಿನಗರ: ದೇವಸುಗೂರು ಹೋಬಳಿ ವ್ಯಾಪ್ತಿಯಲ್ಲಿ ಎರಡು ದಿನ ಸುರಿದ ಮಳೆಗೆ 68 ಮನೆಗಳು ಭಾಗಶಃ ಕುಸಿದಿವೆ.

ದೇವಸೂಗೂರು–12, ಗಂಜಳ್ಳಿ–18, ಹನುಮನದೊಡ್ಡಿ –5, ಹೆಗ್ಗಸನಹಳ್ಳಿ –2, ಅರಷಣಿಗಿ–15, ಮೀರಾಪುರ–12 ಮತ್ತು ಕಾಡ್ಲೂರು ಗ್ರಾಮದಲ್ಲಿ 6 ಮನೆಗಳು ಕುಸಿದಿವೆ.

ಗ್ರಾಮಲೆಕ್ಕಾಧಿಕಾರಿ ಸುರೇಶ ಮತ್ತು ಮಧುಕಾಂತ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಳಿಕ ಮಾತನಾಡಿದ ಅವರು,‘ಮಳೆಗೆ ಕುಸಿದ ಮನೆಗಳ ವೀಕ್ಷಣೆಗೆ ಸಮೀಕ್ಷಾ ತಂಡ ಆಗಮಿಸಲಿದೆ. ಎಷ್ಟು ಮನೆಗಳು ನೆಲಸಮವಾಗಿವೆ ಮತ್ತು ಎಷ್ಟು ಭಾಗಶಃ ಕುಸಿದಿವೆ ಎನ್ನುವ ಕುರಿತು ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಹೇಳಿದರು.

ಸಗಮಕುಂಟ ಗ್ರಾಮದಲ್ಲಿ 20 ಹೆಕ್ಟೇರ್, ಯರಗುಂಟ–30 ಹೆಕ್ಟೇರ್, ವಡ್ಲೂರು–40 ಹೆಕ್ಟೇರ್ ಸೇರಿ ಒಟ್ಟು 90 ಹೆಕ್ಟೇರ್ ಪ್ರದೇಶದಲ್ಲಿ ಭತ್ತ, ಹತ್ತಿ ಹಾಗೂ ತೊಗರಿ ಬೆಳೆ ನಾಶವಾಗಿದೆ ಎಂದು ದೇವಸೂಗೂರು ರೈತ ಸಂಪರ್ಕ ಕೇಂದ್ರದ ಪ್ರಭಾರ ಅಧಿಕಾರಿ ಸಂಜಯ ಅವರು ತಿಳಿಸಿದರು.

ಹೋಬಳಿ ವ್ಯಾಪ್ತಿಯಲ್ಲಿ ಸತತವಾಗಿ ಎರಡು ದಿನ ಸುರಿದ ಮಳೆಯಿಂದ ಆಗಿರುವ ಪರಿಣಾಮಗಳು ಈಗ ಗೋಚರಿಸುತ್ತಿವೆ.

ಜಲಾವೃತ್ತವಾಗಿದ್ದ ಹಲವು ಬಡಾವಣೆಗಳಲ್ಲಿ ಮನೆಗಳ ಗೋಡೆಗಳು ಕುಸಿದು ಬಿದ್ದಿದ್ದು , ಜನರು ಬೀದಿಗೆ ಬಂದಿದ್ದಾರೆ. ರಸ್ತೆಗಳು ಕೂಡ ಹಾಳಾಗಿವೆ. ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿರುವುದು ನೋಡಿ, ರೈತರ ದಿಕ್ಕು ತೋಚದಂತೆ ಆಗಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು