ಶುಕ್ರವಾರ, ಜುಲೈ 30, 2021
20 °C
ಸಾಂಸ್ಥಿಕ ಕ್ವಾರಂಟೈನ್‌ ಕೇಂದ್ರಗಳಲ್ಲಿ 832 ಜನರು

ರಾಯಚೂರು: 975 ಮಾದರಿಗಳ ವರದಿ ನಿರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಜಿಲ್ಲೆಯ ವಿವಿಧೆಡೆ ಶನಿವಾರ 168 ಜನರ ಗಂಟಲು ದ್ರವ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಒಟ್ಟು 975 ವರದಿಗಳನ್ನು ನಿರೀಕ್ಷಿಸಲಾಗುತ್ತಿದೆ.

ಇದುವರೆಗೂ ಒಟ್ಟು 17,208 ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಒಟ್ಟು 15,700 ನೆಗೆಟಿವ್‌ ವರದಿಗಳು ಬಂದಿವೆ. 358 ಪಾಸಿಟಿವ್‌ ವರದಿಗಳು ಬಂದಿದ್ದು, 6 ಮಾದರಿಗಳು ತಿರಸ್ಕೃತವಾಗಿವೆ. ಪಾಸಿಟಿವ್‌ ವರದಿಗಳು ದೇವದುರ್ಗ ತಾಲ್ಲೂಕಿನಲ್ಲಿ ಅತಿಹೆಚ್ಚು 304 ಇದ್ದರೆ, ರಾಯಚೂರು ತಾಲ್ಲೂಕು 33, ಲಿಂಗಸುಗೂರು ತಾಲ್ಲೂಕು 14 ಹಾಗೂ ಮಾನ್ವಿ ತಾಲ್ಲೂಕಿನ 8 ಪ್ರಕರಣಗಳಿವೆ.

ಓಪೆಕ್‌ ಆಸ್ಪತ್ರೆಗೆ ಇದುವರೆಗೂ ಒಟ್ಟು 390 ಜನರನ್ನು ದಾಖಲಿಸಲಾಗಿತ್ತು. ಅದರಲ್ಲಿ 358 ಜನರಿಗೆ ಕೋವಿಡ್‌ ದೃಢವಾಗಿದ್ದು, ಒಟ್ಟು 53 ಜನರನ್ನು ಬಿಡುಗಡೆ ಮಾಡಲಾಗಿದೆ. ರೋಗದ ಲಕ್ಷಣಗಳಿಲ್ಲದ ಹಾಗೂ ಗುಣಮುಖರಾಗುತ್ತಿರುವ 85 ಜನರನ್ನು ಆಸ್ಪತ್ರೆಯಿಂದ ಕ್ವಾರಂಟೈನ್‌ ಕೇಂದ್ರಗಳಿಗೆ ಶನಿವಾರ ಸ್ಥಳಾಂತರಿಸಲಾಗಿದೆ. ಆಸ್ಪತ್ರೆಯಲ್ಲಿ ಸದ್ಯ 220 ಜನರನ್ನು ದಾಖಲು ಮಾಡಿ ವೈದ್ಯರು ನಿಗಾ ವಹಿಸಿದ್ದಾರೆ.

ಹೊರ ರಾಜ್ಯಗಳಿಂದ ಬಂದಿದ್ದ 760 ಜನರನ್ನು ಹೋಂ ಕ್ವಾರಂಟೈನ್‌ ಮಾಡಲಾಗಿತ್ತು. 577 ಜನರು 28 ದಿನಗಳನ್ನು ಪೂರ್ಣ ಮಾಡಿದ್ದಾರೆ. ಸದ್ಯ 183 ಜನರ ಮೇಲೆ ಮಾತ್ರ ನಿಗಾ ವಹಿಸಲಾಗಿದೆ.

ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ತೆರೆದಿದ್ದ 146 ಕ್ವಾರಂಟೈನ್‌ ಕೇಂದ್ರಗಳ ಪೈಕಿ 35 ಕ್ವಾರಂಟೈನ್‌ ಕೇಂದ್ರಗಳಲ್ಲಿ ಮಾತ್ರ ಜನರಿದ್ದಾರೆ. ಒಟ್ಟು 832 ಜನರನ್ನು ಇರಿಸಲಾಗಿದೆ. ರಾಯಚೂರು ತಾಲ್ಲೂಕಿನಲ್ಲಿ 191 ಜನರು, ಲಿಂಗಸುಗೂರು ತಾಲ್ಲೂಕಿನಲ್ಲಿ 172, ದೇವದುರ್ಗ ತಾಲ್ಲೂಕಿನಲ್ಲಿ 414, ಮಾನ್ವಿ ತಾಲ್ಲೂಕಿನಲ್ಲಿ  38, ಸಿಂಧನೂರು ತಾಲ್ಲೂಕಿನಲ್ಲಿ 17 ಜನರಿದ್ದಾರೆ.

ಸಾಂಸ್ಥಿಕ ಕ್ವಾರಂಟೈನ್‌ ಕೇಂದ್ರಗಳಿಂದ ಶನಿವಾರ 333 ಜನರನ್ನು ಬಿಡುಗಡೆ ಮಾಡಲಾಗಿದೆ. ಇದುವರೆಗೂ 10,449 ಜನರನ್ನು ಬಿಡುಗಡೆ ಮಾಡದಂತಾಗಿದೆ. ಸಾಂಸ್ಥಿಕ ಕ್ವಾರಂಟೈನ್‌ ಕೇಂದ್ರಗಳಲ್ಲಿ ಒಟ್ಟು 11,281 ಜನರನ್ನು ಇರಿಸಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು