ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಯಚೂರು | ಆಶೀರ್ವಾದನಗರ ಬಡಾವಣೆ: ಮೂಲ ಮಾಲೀಕರಿಗೆ ನಿವೇಶನ ಹಿಂದಿರುಗಿಸಲು ಆದೇಶ

Published : 22 ಸೆಪ್ಟೆಂಬರ್ 2024, 13:59 IST
Last Updated : 22 ಸೆಪ್ಟೆಂಬರ್ 2024, 13:59 IST
ಫಾಲೋ ಮಾಡಿ
Comments

ರಾಯಚೂರು: ನಗರದ ಬೋಳಮಾನದೊಡ್ಡಿ ರಸ್ತೆಯ ಆಶೀರ್ವಾದನಗರದ ನಿವೇಶನಗಳ ಮಾಲೀಕರಿಗೆ ಮೂರು ತಿಂಗಳದೊಳಗೆ ಅವರ ನಿವೇಶನ ಹಿಂದಿರುಗಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ ಎಂದು ವಕೀಲ ಸಿ.ಎಸ್ ರಸ್ತಾಪುರ ತಿಳಿಸಿದರು.

ಲಕ್ಷ್ಮೀದೇವಿ ಎಂಬುವರು ಆಶಿರ್ವಾದ ನಗರ ಲೇಔಟ್ ನಿರ್ಮಿಸಿದ್ದು, 205 ನಿವೇಶನಗಳ ಪೈಕಿ 108 ನಿವೇಶನ ಮಾರಾಟ ಮಾಡಿದ್ದರು. 18 ನಿವೇಶನದಾರರ ಪ್ರಕರಣದಲ್ಲಿ ಜಿಲ್ಲಾ ಮತ್ತು ಪ್ರಧಾನ ನ್ಯಾಯಾಲಯ ಪರಿಶೀಲಿಸಿ ಮಹತ್ವದ ತೀರ್ಪು ನೀಡಿದೆ ಎಂದು ಭಾನುವಾರ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

ರವಿಂದ್ರ ಜಲ್ದಾರ್ ಎಂಬುವರು ಖೊಟ್ಟಿ ದಾಖಲೆ ಸೃಷ್ಟಿಸಿ ಶ್ಯಾಮಾಚಾರ ಅವರಿಂದ ಖರೀದಿ ಮಾಡಿರುವುದಾಗಿ ನಂಬಿಸಿ ನಿವೇಶನಗಳನ್ನು ಮಾರಾಟ ಮಾಡಿರುವ ಆರೋಪಗಳಿವೆ. ನಿವೇಶನ ಮಾಲೀಕರಿಗೆ ಮುಂದಿನ ಮೂರು ತಿಂಗಳಲ್ಲಿ ಅವರವರ ನಿವೇಶನ ಹಿಂದಿರುಗಿಸಬೇಕು ಎಂದು ಆದೇಶಿಸಲಾಗಿದೆ ಎಂದು ತಿಳಿಸಿದರು.

ನ್ಯಾಯಾಲಯದ ತೀರ್ಪಿನ ಅನ್ವಯ 18 ಜನರ ನಿವೇಶನಗಳಲ್ಲಿ ಮನೆಗಳಿದ್ದರೂ, ಅವುಗಳನ್ನು ತೆರವುಗೊಳಿಸಿ ಸಂಬಂಧಪಟ್ಟ ನಿವೇಶನದಾರರಿಗೆ ಈ ನಿವೇಶನಗಳನ್ನು ನೀಡುವಂತೆ ನ್ಯಾಯಾಲಯ ತೀರ್ಪು ನೀಡಿದೆ ಎಂದರು.

ಉಳಿದ ಏಳು ಜನ ಅರ್ಜಿದಾರರ ಪರವಾಗಿ ಇದೇ ಆಧಾರದ ಮೇಲೆ ನ್ಯಾಯಾಲಯ ತೀರ್ಪು ನೀಡುವ ನಿರೀಕ್ಷೆಗಳಿವೆ. ಮುಂದಿನ ಮೂರು ತಿಂಗಳಲ್ಲಿ ಮಾಲೀಕರಿಗೆ ನಿವೇಶನ ಹಿಂತಿರುಗಿಸುವ ಪ್ರಕ್ರಿಯೆ ಕೈಗೊಳ್ಳದಿದ್ದರೆ, ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮುಖಂಡರಾದ ಬಾಲಾಜಿ, ಶ್ರೀದೇವಿ, ಹುಸೇನಪ್ಪ ಭಂಡಾರಿ ಹಾಗೂ ಓಂಕಾರ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT