ಶುಕ್ರವಾರ, ಸೆಪ್ಟೆಂಬರ್ 17, 2021
22 °C
ಅಕ್ರಮ ಮರಳು ದಂಧೆಯಲ್ಲಿ ಶಾಮೀಲು ಆರೋಪ

ತಹಶೀಲ್ದಾರ್ ಅಮಾನತಿಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಾನ್ವಿ: ‘ತಾಲ್ಲೂಕಿನಲ್ಲಿ ಅಕ್ರಮ ಮರಳು ದಂಧೆಯಲ್ಲಿ ಶಾಮೀಲಾಗಿರುವ ತಹಶೀಲ್ದಾರ್ ಸಂತೋಷರಾಣಿ ಅವರನ್ನು ಜಿಲ್ಲಾಡಳಿತ ಅಮಾನತುಗೊಳಿಸಬೇಕು’ ಎಂದು ದಲಿತಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಪ್ರಭುರಾಜ ಕೊಡ್ಲಿ ಅವರು ಒತ್ತಾಯಿಸಿದ್ದಾರೆ.

‘ಅಕ್ರಮ ಮರಳು ಸಾಗಣೆಗೆ ₹30 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿರುವ ತಹಶೀಲ್ದಾರ್ ಸಂತೋಷರಾಣಿ ಅವರ ಆಡಿಯೊ ಸಂಭಾಷಣೆ ವೈರಲ್ ಆಗಿರುವುದು ಅವರ ಭ್ರಷ್ಟಾಚಾ ರಕ್ಕೆ ಸಾಕ್ಷಿಯಾಗಿದೆ. ಕಾರಣ ತಹ ಶೀಲ್ದಾರ್ ಅವರನ್ನು ಅಮಾನತುಗೊಳಿಸಿ ಸಮಗ್ರ ತನಿಖೆ ನಡೆಸಬೇಕು. ಸೆ.17ರ ಒಳಗಾಗಿ ತಹಶೀಲ್ದಾರ್ ಅವರನ್ನು ಅಮಾನತು ಗೊಳಿಸದಿದ್ದರೆ, ಕಲ್ಯಾಣ ಕರ್ನಾಟಕ ದಿನಾಚರಣೆ ಕಾರ್ಯಕ್ರಮ ದಿನದಂದು ಜಿಲ್ಲಾ
ಉಸ್ತುವಾರಿ ಸಚಿವರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ತಾಲ್ಲೂಕಿನಲ್ಲಿ ಆಕ್ರಮ ಕಲ್ಲು ಗಣಿಗಾರಿಕೆ, ಮರಳುಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ. ಮಾನ್ವಿ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ, ಸಂಚಾರ ದಟ್ಟಣೆ ಸಮಸ್ಯೆ, ಕಾಳಸಂತೆಯಲ್ಲಿ ಪಡಿತರ ಅಕ್ಕಿ ಮಾರಾಟದ ಕುರಿತು ಅನೇಕ ಬಾರಿ ದೂರು ನೀಡಿದ್ದರೂ ಕ್ರಮಕ್ಕೆ ಮುಂದಾಗದ ತಹಶೀಲ್ದಾರ್ ಸಂತೋಷರಾಣಿ ಅಕ್ರಮ ಮರಳು ದಂಧೆಕೋರರೊಂದಿಗೆ ಶಾಮೀಲಾಗಿರುವುದು ಖಂಡನೀಯ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಒಕ್ಕೂಟದ ಮುಖಂಡರಾದ ಪಿ.ಅನೀಲ್ ಕುಮಾರ, ಅರಳಪ್ಪ ಯದ್ದಲದಿನ್ನಿ, ಪಿ.ಪ್ರವೀಣಕುಮಾರ, ಚಿನ್ನಪ್ಪ ಪಟ್ಟದಕಲ್, ಶಾನವಾಜ್, ಯೇಸುರಾಜ, ರಮೇಶ ಕರಡಿಗುಡ್ಡ, ಹನುಮಂತ ಕೋಟೆ, ಲಾರೇನ್ಸ್, ರಮೇಶ ನೀರಮಾನ್ವಿ, ರಮೇಶ ಕರಡಿಗುಡ್ಡ ಹಾಗೂ ಮೈನುದ್ದೀನ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.