ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡಳಿತ ನಡೆಸಲು ಪೌರಾಯುಕ್ತ ವಿಫಲ: ಆರೋಪ

Last Updated 14 ಫೆಬ್ರುವರಿ 2020, 14:21 IST
ಅಕ್ಷರ ಗಾತ್ರ

ರಾಯಚೂರು: ರಾಯಚೂರು ನಗರಸಭೆಯಲ್ಲಿ ಖಾತಾ ಮುಟೇಶನ್, ಕಟ್ಟಡ ಪರವಾನಗಿ ಸೇರಿದಂತೆ ಯಾವುದೇ ಕೆಲಸಗಳು ಸಮರ್ಪಕವಾಗಿ ನಡೆಯದೇ ನಾಗರಿಕರು ಪರದಾಡುವಂತಾಗಿದ್ದು, ಅಲ್ಲದೇ ನಗರಸಭೆ ಪೌರಾಯುಕ್ತರು ಕಚೇರಿ ಕೆಲಸ ಮಾಡುವಲ್ಲಿ ವಿಫಲರಾಗಿದ್ದಾರೆ ಎಂದು ಬಹುಜನ ಕ್ರಾಂತಿ ಮೋರ್ಚಾ ಜಿಲ್ಲಾ ಸಂಯೋಜಕ ಆದಿಲ್ ಶೇಖ್ ಮೊಹಮ್ಮದ್ ಅಜೀಮ್ ಆರೋಪಿಸಿದರು.

ಶುಕ್ರವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ನಗರಸಭೆಯಲ್ಲಿ ಕಳೆದ ಆರು ತಿಂಗಳಿನಿಂದ ಅಭಿವೃದ್ದಿ ಕಾರ್ಯಗಳು ಸ್ಥಗಿತವಾಗಿದ್ದು ಕಚೇರಿ ಕೆಲಸಗಳು ಸರಿಯಾಗಿ ಅಗುತ್ತಿಲ್ಲ ಸ್ವಚ್ಚತೆ ಕಾರ್ಯ ಮಾಡುತ್ತಿರುವ ಪೌರ ಕಾರ್ಮಿಕರಿಗೆ ಸರಿಯಾದ ವೇತನ ಪಾವತಿ ನಗರಸಭೆ ಪೌರಾಯುಕ್ತರು ಆಡಳಿತ ನಡೆಸುವಲ್ಲಿ ವಿಫಲರಾಗಿದ್ದಾರೆ ಎಂದು ದೂರಿದರು.

ಜನರ ಹಾಗೂ ಪೌರಕಾರ್ಮಿಕ ವೇತನ ಹಾಗೂ ಸಮಸ್ಯೆಗಳನ್ನು ತಿಳಿಸಲು ನಗರಸಭೆ ಪೌರಾಯುಕ್ತರು ಸ್ಪಂದಿಸುತ್ತಿಲ್ಲ ಹಾಗೂ ಕಚೇರಿಯಲ್ಲಿ ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ. ಈ ಬಗ್ಗೆ ಜಿಲ್ಲಾ ಯೋಜನಾ ನಿರ್ದೇಶಕರಿಗೆ ತಿಳಿಸಿದರೂ ಉಡಾಫೆಯಾಗಿ ಮಾತನಾಡುತಿದ್ದಾರೆ. ಕೂಡಲೇ ಇಬ್ಬರು ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಅಭಿವೃದ್ಧಿ ಕಾರ್ಯಗಳಿಗೆ ಸ್ಪಂದಿಸಬೇಕು ಎಂದು ಮನವಿ ಮಾಡಿದರು.

ವಿವಿಧ ಸಂಘಟನೆಗಳ ಮುಖಂಡರಾದ ಸತೀಶ್ ಕುಮಾರ, ಖಲೀಲ್ ಪಾಶಾ,ಇಮ್ರಾನ್ ಬಡೇಸಾಬ್, ರಾಮು, ಉರುಕುಂದಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT