ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಂಕರಾಚಾರ್ಯ ಪೀಠಗಳ ಅಪಸ್ವರ ಸರಿಯಾಗಿದೆ: ಸಿದ್ಧರಮಾನಂದ ಸ್ವಾಮೀಜಿ

Published 12 ಜನವರಿ 2024, 16:28 IST
Last Updated 12 ಜನವರಿ 2024, 16:28 IST
ಅಕ್ಷರ ಗಾತ್ರ

ರಾಯಚೂರು: ‘ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ವಿಚಾರದಲ್ಲಿ ಶಂಕರಾಚಾರ್ಯ ಪೀಠಗಳು ಅಪಸ್ವರ ಎತ್ತಿರುವುದು ಸರಿ ಎನಿಸುತ್ತದೆ’ ಎಂದು ತಿಂಥಣಿ ಬ್ರಿಡ್ಜ್ ಕಾಗಿನೆಲೆ ಕನಕ ಗುರುಪೀಠದ ಸಿದ್ಧರಮಾನಂದ ಸ್ವಾಮೀಜಿ ಹೇಳಿದರು.

‘ಯಾವುದೇ ದೇವಸ್ಥಾನ ಪೂರ್ಣವಾಗಿ ನಿರ್ಮಾಣವಾದ ನಂತರ ಉದ್ಘಾಟನೆ ಮಾಡಬೇಕು. ತರಾತುರಿಯಲ್ಲಿ ಉದ್ಘಾಟನೆ ಮಾಡಿದರೆ ಬೇರೆ ಉದ್ದೇಶ ಹೊಂದಿರುವುದು ಕಾಣುತ್ತದೆ’ ಎಂದು ದೇವದುರ್ಗ ತಾಲ್ಲೂಕಿನ ಸಂಸ್ಥಾನ ಮಠದಲ್ಲಿ ಅವರು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

‘ಬೇರೆ ಉದ್ದೇಶದಿಂದ ರಾಮಮಂದಿರ ಉದ್ಘಾಟನೆ ಮಾಡಲು ಹೊರಟಿರುವುದು ರಾಮನಿಗೂ ನೋವು ತಂದಿದೆ. ಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಕನಕ ಗುರುಪೀಠಕ್ಕೂ ಆಹ್ವಾನ ಬಂದಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT