ಗುರುವಾರ , ಅಕ್ಟೋಬರ್ 29, 2020
28 °C

ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿಂಧನೂರು: ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳು ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಬ್ರಾಹ್ಮಣ ಸಮಾಜದ ನಗರಸಭೆ ಸದಸ್ಯೆ ಸರಿತಾ ವೆಂಕಟೇಶ ಬಂಡಿ ಅವರಿಗೆ ನೀಡಬೇಕು ಎಂದು ಬ್ರಾಹ್ಮಣ ಸಮಾಜದ ಮುಖಂಡರು ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಅವರಿಗೆ ಮನವಿ ಮಾಡಿದರು.

ಅಧ್ಯಕ್ಷ ಗೋವಿಂದರಾವ್ ಮಾತನಾಡಿ, ಸಿಂಧನೂರು ಪುರಸಭೆ ಹಾಗೂ ನಗರಸಭೆಯಾಗಿ ಮೇಲ್ದರ್ಜೆಗೆ ಏರಿದ ನಂತರ ಒಮ್ಮೆಯೂ ಬ್ರಾಹ್ಮಣ ಸಮಾಜದ ಸದಸ್ಯರಿಗೆ ಅಧ್ಯಕ್ಷ ಅಥವಾ ಉಪಾಧ್ಯಕ್ಷ ಸ್ಥಾನವನ್ನು ನೀಡಿಲ್ಲ. ಈ ಭಾರಿ ಎರಡು ಸ್ಥಾನಗಳು ಸಾಮಾನ್ಯ ವರ್ಗಕ್ಕೆ ಮೀಸಲಿರುವುದರಿಂದ ಒಂದನ್ನಾದರು ನಮ್ಮ ಸಮುದಾಯಕ್ಕೆ ನೀಡಬೇಕೆಂದು ಕೋರಿದರು.

ಬ್ರಾಹ್ಮಣ ಮಹಾಸಭಾದ ಜಿಲ್ಲಾ ಘಟಕದ ಉಪಾಧ್ಯಕ್ಷ ಪ್ರಹ್ಲಾದಗುಡಿ ವಕೀಲ, ರಾಮಕೃಷ್ಣಾಚಾರ್ ಗೋನ್ವಾರ್, ನರಸಿಂಹಾಚಾರ್ ಮಠಾಧಿಕಾರ್, ನರಸಿಂಗ್‍ರಾವ್ ಚನ್ನಳ್ಳಿ, ವೆಂಕಣ್ಣಚಾರ್ ದೋಟಿಹಾಳ, ಆರ್.ವಿ.ಜೋಷಿ, ಎಂ.ಕೆ.ಗೌರಕರ್, ತಿರುಮಲರಾವ್ ಕುಲಕರ್ಣಿ, ಮನೋಹರರಾವ್ ಕುಲಕರ್ಣಿ, ಗೋಪಾಲರಾವ್ ಕುಲಕರ್ಣಿ, ಹನುಮಂತಾಚಾರ್ ಮಸ್ಕಿ, ಭೀಮಾಚಾರ್ ಪುರೋಹಿತ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.