ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಧನೂರು: ಜೆಡಿಎಸ್ ಪರಿಶಿಷ್ಟ ಜಾತಿ ಘಟಕಕ್ಕೆ ಪದಾಧಿಕಾರಿಗಳ ನೇಮಕ

Published 23 ಏಪ್ರಿಲ್ 2024, 15:29 IST
Last Updated 23 ಏಪ್ರಿಲ್ 2024, 15:29 IST
ಅಕ್ಷರ ಗಾತ್ರ

ಸಿಂಧನೂರು: ಜಾತ್ಯತೀತ ಜನತಾದಳ ಪಕ್ಷದ ಸಿಂಧನೂರು ತಾಲ್ಲೂಕು ಪರಿಶಿಷ್ಟ ಜಾತಿ ಘಟಕಕ್ಕೆ ನೇಮಕಗೊಂಡ ನೂತನ ಪದಾಧಿಕಾರಿಗಳ ಪಟ್ಟಿಯನ್ನು ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ನಾಡಗೌಡ ಮಂಗಳವಾರ ಬಿಡುಗಡೆಗೊಳಿಸಿದರು.

ಗೋವಿಂದರಾಜ ಸೋಮಲಾಪುರ (ಗೌರವಾಧ್ಯಕ್ಷ), ಗುರುರಾಜ ಮುಕ್ಕುಂದ (ಅಧ್ಯಕ್ಷ), ವಿನೋದಕುಮಾರ (ಪ್ರಧಾನ ಕಾರ್ಯದರ್ಶಿ), ವೀರೇಶ ಜಾಲಿಹಾಳ, ಪಂಪಾಪತಿ ಹಂಚಿನಾಳ (ಉಪಾಧ್ಯಕ್ಷ), ವೆಂಕಟೇಶ ಗಿರಿಜಾಲಿ (ನಗರ ಘಟಕದ ಅಧ್ಯಕ್ಷ), ನಿರುಪಾದೆಪ್ಪ ನಾಗಲಾಪುರ (ಪ್ರಧಾನ ಕಾರ್ಯದರ್ಶಿ), ಲಕ್ಷ್ಮಣ ಭೋವಿ (ಉಪಾಧ್ಯಕ್ಷ) ಅವರು ನೂತನವಾಗಿ ನೇಮಕಗೊಂಡಿದ್ದಾರೆ.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ವಿರೂಪಾಕ್ಷಿ ಅವರು ನೂತನ ಪದಾಧಿಕಾರಿಗಳನ್ನು ನೇಮಕ ಮಾಡಿ ಕೂಡಲೇ ಗುರುತರವಾದ ಜವಾಬ್ದಾರಿಯನ್ನು ವಹಿಸಿಕೊಂಡು ಪಕ್ಷದ ಸಂಘಟನೆ ಬಲಪಡಿಸಲು ಕಾರ್ಯೋನ್ಮುಖರಾಗಲು ಆದೇಶಿಸಿದ್ದಾರೆ ಎಂದು ಬಸವರಾಜ ನಾಡಗೌಡ ತಿಳಿಸಿದರು.

ಇದೇ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.

ನಗರಸಭೆ ಸದಸ್ಯರಾದ ಚಂದ್ರಶೇಖರ ಮೈಲಾರ, ದಾಸರಿ ಸತ್ಯನಾರಾಯಣ, ಮುಖಂಡರಾದ ವೆಂಕೋಬಣ್ಣ ಕಲ್ಲೂರು, ಎಸ್.ಪಿ.ಟೈಲರ್, ಸುಮಿತ್ ತಡಕಲ್, ಅಜಯ್ ದಾಸರಿ, ಸೈಯ್ಯದ್ ಆಸೀಫ್ ಹಾಗೂ ಶಂಕ್ರಗೌಡ ಎಲೆಕೂಡ್ಲಿಗಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT