ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಕ್ತಿನಗರ: ಕೀಟನಾಶಕದ ಬಗ್ಗೆ ಅರಿವು

Published 30 ಜೂನ್ 2024, 13:48 IST
Last Updated 30 ಜೂನ್ 2024, 13:48 IST
ಅಕ್ಷರ ಗಾತ್ರ

ಶಕ್ತಿನಗರ: ದೇವಸುಗೂರು ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರ ವತಿಯಿಂದ ಸಗಮಕುಂಟ ಗ್ರಾಮದಲ್ಲಿ ರೈತರಿಗೆ ಗುಣಮಟ್ಟದ ಬೀಜ, ರಸ ಗೊಬ್ಬರ ಮತ್ತು ಪೀಡೆನಾಶಕಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಜರುಗಿತು.

ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಮಾನಸ ವೀಣಾ ಮಾತನಾಡಿ,‘ರೈತರು ಪರವಾನಿಗೆ ಪಡೆದ ಅಧಿಕೃತ ಮಾರಾಟಗಾರರಿಂದ ಮಾತ್ರ ಬೀಜ ಗೊಬ್ಬರ ಕ್ರಿಮಿನಾಶಕಗಳನ್ನು ಖರೀದಿಸಬೇಕು. ಖರೀದಿಸಿದ ವಸ್ತುಗಳಿಗೆ ತಪ್ಪದೇ ರಸೀದಿಗಳನ್ನು ಪಡೆದಿಟ್ಟುಕೊಳ್ಳಬೇಕು. ಅನಧಿಕೃತ ವ್ಯಕ್ತಿಗಳಿಂದ ಬೀಜಗಳನ್ನು ಖರೀದಿಸಿ ಮೋಸ ಹೋಗಬೇಡಿ’ ಎಂದರು.

‘ರೈತರು ಬಿತ್ತನೆ ಮಾಡುವುದಕ್ಕೂ ಮುಂಚೆ ತಪ್ಪದೇ ಬೀಜೋಪಚಾರ ಮಾಡಿ ಬಿತ್ತನೆ ಮಾಡಬೇಕು ಇದರಿಂದ ಮೊದಲ ಹಂತದಲ್ಲಿ ಬರುವಂತಹ ಹಲವಾರು ರೋಗಗಳನ್ನು ನಿಯಂತ್ರಿಸಿ ಬೆಳೆಯು ಗುಣಮಟ್ಟವಾಗಿ ಬೆಳೆಯಲು ಸಹಕಾರಿಯಾಗಲಿದೆ’ ಎಂದರು.

ಸಗಮಕುಂಟ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಾಮಪ್ಪ ನಾಯಕ್, ಸದಸ್ಯರಾದ ತಿಮ್ಮಪ್ಪ ಸಾಲಿ, ಶಿವಲಿಂಗಪ್ಪ ಕೊರವಿಹಾಳ, ಮಲ್ಲೇಶಪ್ಪ ಮಾಮಡದೊಡ್ಡಿ, ಸಗಮಕುಂಟ ಗ್ರಾಮದ ದೇವಪ್ಪ, ಬೂದೆಪ್ಪ, ಶ್ರೀನಿವಾಸ್, ಗುರುರಾಜ್, ಶಿವರಾಜ್, ಭಾಷಾ ಮೌಲ, ಅಬ್ರಾಮ್, ಜಂಗ್ಲಪ್ಪ, ಲಕ್ಷ್ಮಣ, ಮಲ್ಲೇಶ್, ಚಂದ್ರಪ್ಪ, ಕಾಸಿಂ, ಜಯಪ್ಪ, ರಾಘವೇಂದ್ರ, ಸುರೇಶ್ ಬಡಿಗೇರ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT