ರಾಯಚೂರು: ‘ದಾಸ ಸಾಹಿತ್ಯ ಜಾತಿ, ಮತ, ಪಂಥ ಮೀರಿ ಬೆಳೆದ ಭಕ್ತಿ ಸಾಹಿತ್ಯ. ಇದಕ್ಕೆ ಪಿಂಜಾರ ಸಮುದಾಯದಲ್ಲಿ ಜನಿಸಿದ ಬಡೇ ಸಾಹೇಬರು ಹರಿದಾಸರ 881 ಕೀರ್ತನೆ, 110 ಉಗಾಭೋಗ, 5 ಶತಾಷ್ಟಕ ಹಾಗೂ ಹಲವು ನಾಟಕಗಳನ್ನು ಅನ್ಯ ಭಾಷೆಯಲ್ಲಿ ರಚಿಸಿದ್ದು ನಿದರ್ಶನ’ ಎಂದು ಶ್ರುತಿ ಸಾಹಿತ್ಯದ ಅಧ್ಯಕ್ಷ ಮುರಳಿಧರ ಕುಲಕರ್ಣಿ ಹೇಳಿದರು.

ನಗರದ ಜವಾಹರ ನಗರದ ಬಯಲು ಆಂಜನೇಯ ದೇವಸ್ಥಾನದಲ್ಲಿ ಶ್ರೀರಾಮದಾಸರ 53 ನೇ ಆರಾಧನೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬಡತನ ಮತ್ತು ಕಷ್ಟ ಕಾರ್ಪಣ್ಯಗಳನ್ನು ಅನುಭವಿಸಿದ ಬಡೇಸಾಹೇಬರು ಜೀವನದಲ್ಲಿ ಮನನೊಂದು ರಾಯಚೂರಿನ ರೈಲ್ವೆ ನಿಲ್ದಾಣದಲ್ಲಿ ಮಲಗಿದಾಗ, ಇವರಿಗೆ ರಾಮ ಅವಧೂತ ಸನ್ಯಾಸಿಯ ಪರಿಚಯವಾಗುತ್ತದೆ. ಅವರ ಹಂಪಿಗೆ ಬರಲು ತಿಳಿಸುತ್ತಾರೆ. ಹಂಪಿಗೆ ಹೋದರೆ ಅವರು ಸಿಗುವುದಿಲ್ಲ. ಮಾನಸಿಕ ನೆಮ್ಮದಿ ಇಲ್ಲದೆ, ತೊಳಲಾಡುತ್ತಿರುವ ಬಡೆಸಾಹೇಬರು ಕೊನೆಗೆ ಆತ್ಮಹತ್ಯೆ ಮಾಡಿಕೊಳ್ಳಲು ಹಂಪಿಯ ಚಕ್ರ ತೀರ್ಥದಲ್ಲಿ ಹಾರಿದಾಗ ಅವರಿಗೆ ಜ್ಞಾನೋದಯವಾಗಿ ಶ್ರೀರಾಮ ಎಂಬ ಅಂಕಿತ ಪ್ರಾಪ್ತಿಯಾಗುತ್ತದೆ’ ಎಂದರು.

‘ನಂತರ ಅವರು ದಾಸ ಸಾಹಿತ್ಯದ ಕಡೆಗೆ ವಾಲಿ ವರ ಕವಿಗಳಾಗಿ ದೈವಾಂಶ ಸಂಭೂತರಾಗಿ ಇಂದಿಗೂ ಅವರು ಪ್ರಸ್ತುತರಾಗಿದ್ದಾರೆ’ ಎಂದು ಹೇಳಿದರು.

ಪತ್ರಕರ್ತ ಜಯಕುಮಾರ ದೇಸಾಯಿ ಮಾತಾಡಿ,‘ಹರಿದಾಸ ಪಂಥದಲ್ಲಿ ಶ್ರೇಷ್ಠ ಹರಿದಾಸರಾಗಿ, ಜನಸಾಮಾನ್ಯರಿಗೆ ಸನ್ಮಾರ್ಗ ತೋರಿಸಿದ ಕೀರ್ತಿ ಶ್ರೀರಾಮದಾಸರಿಗೆ ಸಲ್ಲುತ್ತದೆ’ ಎಂದು ಹೇಳಿದರು.

ಬ್ರಾಹ್ಮಣ ಸಮಾಜದ ಮುಖಂಡ ಪ್ರಸನ್ನ ಆಲಂಪಲ್ಲಿ ಉದ್ಘಾಟಿಸಿದರು. ಆಂಜನೇಯ ದೇವಸ್ಥಾನದ ಅರ್ಚಕ ಶ್ರೀಧರಾಚಾರ್ಯ ಮುಂಗಲಿ ಅವರು ದಾಸರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿದರು.

ಇಂದಿರಾಬಾಯಿ ಸಂಗಮ, ವಾಸುಕಿ ಕರಣಂ, ಆದಿತಿ ಕರಣಂ, ಸುಷ್ಮಾ ಕರಣಂ, ನಿವೃತ್ತ ಶಿಕ್ಷಕಿ ಭಾರತಿ ಅವರು ರಾಮದಾಸರು ರಚಿಸಿದ ಸಂಕೀರ್ತನೆಗಳನ್ನು ಹಾಡಿದರು.

ಕೇಶವ ರಾವ್ ಕುಲಕರ್ಣಿ, ಕೊಪ್ರೇಶ್ ಸೋದೇಗಾರ, ಕೊಪ್ರೇಶ್ ದೇಸಾಯಿ, ನಿವೃತ್ತ ಶಿಕ್ಷಕಿ ನಾಗರತ್ನ ಕಲ್ಲೂರ್, ಕೃಷ್ಣಮೂರ್ತಿ ಹುಣಸಗಿ ಹಾಗೂ ಶ್ರೀವಿಜಯ ವಿಠ್ಠಲ ಭಜನಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.