ಗುರುವಾರ , ಆಗಸ್ಟ್ 22, 2019
27 °C

ಬಾಲಮಾರಮ್ಮ ದೇವಿ ಜಾತ್ರೆ ಇಂದಿನಿಂದ

Published:
Updated:
Prajavani

ರಾಯಚೂರು: ನಗರದ ತಿಮ್ಮಾಪುರಪೇಟೆ ಬಡಾವಣೆಯಲ್ಲಿರುವ ಬಾಲಮಾರೆಮ್ಮ ದೇವಿಯ ಜಾತ್ರಾ ಮಹೋತ್ಸವ ಜುಲೈ 23 ರಿಂದ ಆರಂಭವಾಗಲಿದೆ. ಬುಧವಾರ ಹಾಗೂ ಗುರುವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

23 ರಂದು ಬೆಳಿಗ್ಗೆ ಬಾಲಮಾರೆಮ್ಮ ದೇವಿಗೆ ವಿಶೇಷ ಅಭಿಷೇಕ, ಪಲ್ಲಕ್ಕಿ ಸೇವೆ ಹಾಗೂ ರಾತ್ರಿ ತೊಟ್ಟಿಲು ಕಾರ್ಯಕ್ರಮಗಳು ನೆರವೇರಲಿವೆ. ಬುಧವಾರ ಬೆಳಿಗ್ಗೆಯಿಂದ ಸಂಜೆವರೆಗೂ ದೇವಿಗೆ ಭಕ್ತರಿಂದ ಕುಂಭವೇಳ, ಸಂಜೆ 6 ಕ್ಕೆ ದೇವಿಗೆ ವಿಶೇಷ ಪೂಜೆ ಹಾಗೂ ಉಚ್ಛಾಯಿ ನಡೆಯಲಿದೆ.

ಗುರುವಾರ ಬೆಳಿಗ್ಗೆ ವಿಶೇಷ ಪೂಜೆ, ಮಧ್ಯಾಹ್ನ 12 ಗಂಟೆಗೆ ತಿಮ್ಮಾಪುರಪೇಟೆ ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಕೈ ಕಲ್ಲು, ಉಸುಕಿನ ಚೀಲ ಎತ್ತುವ ಸ್ಪರ್ಧೆಗಳು ನಡೆಯಲಿವೆ. ಗಣ್ಯರಿಂದ ಬಹುಮಾನ ವಿತರಣೆ ಜರುಗಲಿದೆ. ಸಂಜೆ 7 ಕ್ಕೆ ಬಾಲಮಾರೆಮ್ಮ ದೇವಿಯ ಮಹಾರಥೋತ್ಸವ ವಿಜೃಂಭಣೆಯಿಂದ ಜರುಗಲಿದೆ.

ಮಹಾರಥೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಮಠಗಳ ಸ್ವಾಮೀಜಿಗಳು ಸಾನಿಧ್ಯ ವಹಿಸಲಿದ್ದಾರೆ. ರಾಜಕೀಯ ಮುಖಂಡರು, ವಿವಿಧ ಸಮಾಜದ ಮುಖಂಡರು ಭಾಗವಹಿಸಲಿದ್ದಾರೆ ಎಂದು ತಿಳಿಸಲಾಗಿದೆ.

Post Comments (+)