ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಾರತದ ಸಂವಿಧಾನಕ್ಕೆ ಬುದ್ಧ, ಬಸವನ ವಿಚಾರ ಬುನಾದಿ’

Published 10 ಮೇ 2024, 16:03 IST
Last Updated 10 ಮೇ 2024, 16:03 IST
ಅಕ್ಷರ ಗಾತ್ರ

ಸಿಂಧನೂರು: ‘ಭಾರತ ಸಂವಿಧಾನದಲ್ಲಿ ಅಡಕವಾಗಿರುವ ಜಾತ್ಯತೀತ, ಸಮಾನತೆ, ಸರ್ವರಿಗು ಸಮಬಾಳು-ಸರ್ವರಿಗು ಸಮಪಾಲು ತತ್ವಗಳಿಗೆ ಗೌತಮ ಬುದ್ಧ ಮತ್ತು ಬಸವಣ್ಣ ಬುನಾದಿಯಾಗಿದ್ದಾರೆ. ಅಂದಿನ ಅನುಭವ ಮಂಟಪದಲ್ಲಿ ಎಲ್ಲ ಶ್ರಮಿಕ ವರ್ಗಕ್ಕೆ ಆದ್ಯತೆ ನೀಡಲಾಗಿತ್ತು’ ಎಂದು ಬಸವ ಕೇಂದ್ರದ ಜಿಲ್ಲಾ ಘಟಕದ ಅಧ್ಯಕ್ಷ ವೀರಭದ್ರಪ್ಪ ಕುರುಕುಂದಿ ಅಭಿಪ್ರಾಯಪಟ್ಟರು.

ತಾಲ್ಲೂಕು ಆಡಳಿತದಿಂದ ಮಿನಿವಿಧಾನಸೌಧದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬಸವ ಜಯಂತಿ ಮತ್ತು ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಹಶೀಲ್ದಾರ್ ಎಚ್.ಅರುಣ ದೇಸಾಯಿ ಮಾತನಾಡಿ ‘ಜಾತಿ-ಮತ, ಪಂಥ, ಧರ್ಮ ಯಾವುದೇ ಸಂಕೋಲೆಗಳಿಗೆ ಒಳಗಾಗದೆ ಅನುಭವ ಮಂಟಪದಲ್ಲಿ ಎಲ್ಲ ಶರಣರನ್ನು ಸಮಾನವಾಗಿ ಕಾಣಲಾಗುತ್ತಿತ್ತು. ಗುಡಿ-ಗುಂಡಾರಗಳಿಗಿಂತ ಇಷ್ಟಲಿಂಗಕ್ಕೆ ಮಹತ್ವ ನೀಡಿದ್ದ ಅವರು ‘ಸ್ಥಾವರಕ್ಕೆ ಅಳಿವುಂಟು ಜಂಗಮ್ಮಕ್ಕಳಿವಿಲ್ಲ’ ಎಂದು ಜ್ಞಾನಕ್ಕೆ ಮಹತ್ವ ನೀಡಿದ್ದರು ಎಂದು ಹೇಳಿದರು.

ಹೇಮರೆಡ್ಡಿ ಮಲ್ಲಮ್ಮ ಅವರು ಸಾದ್ವಿ ಮಹಿಳೆಯಾಗಿ ಮೈದುನನ ಮನ ಪರಿವರ್ತನೆ ಮಾಡುವ ಮೂಲಕ ವೇಮನನನ್ನು ಮಹಾ ಜ್ಞಾನಿ ಮತ್ತು ದಾರ್ಶನಿಕನನ್ನಾಗಿ ಮಾಡಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ ಎಂದು ಅರುಣ ದೇಸಾಯಿ ಹೇಳಿದರು.

ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ನಾಡಗೌಡ ಮಾತನಾಡಿದರು. ಮುಖಂಡರಾದ ಕೆ.ಕರಿಯಪ್ಪ, ಕರೆಗೌಡ ಕುರುಕುಂದಿ, ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಅಧಿಕಾರಿ ರುದ್ರಪ್ಪ ಕುರುಕುಂದಿ, ನಿರುಪದೆಪ್ಪ ವಕೀಲ, ಗುಂಡಪ್ಪ ಬಳಿಗಾರ, ವೆಂಕೋಬ ನಾಯಕ, ಅಶೋಕಗೌಡ ಗದ್ರಟಗಿ, ಚಂದ್ರಗೌಡ ಬಾದರ್ಲಿ, ಶಿವಕುಮಾರ ಜವಳಿ, ನಿರೂಪಾದೆಪ್ಪ ಜೋಳದರಾಶಿ, ಲಿಂಗಾಧರ ಗುರುಸ್ವಾಮಿ, ಖಾಜಿ ಮಲ್ಲಿಕ್ ವಕೀಲ ಇದ್ದರು.

ಸಿಂಧನೂರಿನಲ್ಲಿ ಬಸವ ಜಯಂತಿ ಅಂಗವಾಗಿ ಶುಕ್ರವಾರ ಸಂಜೆ ಬಸವ ವೃತ್ತದಿಂದ ಆರ್‍ಜಿಎಂ ಶಾಲಾ ಮೈದಾನದ ವರೆಗೆ ಬಸವಣ್ಣನ ಮೂರ್ತಿಯ ಮೆರವಣಿಗೆ ನಡೆಸಲಾಯಿತು
ಸಿಂಧನೂರಿನಲ್ಲಿ ಬಸವ ಜಯಂತಿ ಅಂಗವಾಗಿ ಶುಕ್ರವಾರ ಸಂಜೆ ಬಸವ ವೃತ್ತದಿಂದ ಆರ್‍ಜಿಎಂ ಶಾಲಾ ಮೈದಾನದ ವರೆಗೆ ಬಸವಣ್ಣನ ಮೂರ್ತಿಯ ಮೆರವಣಿಗೆ ನಡೆಸಲಾಯಿತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT