ಶುಕ್ರವಾರ, ಸೆಪ್ಟೆಂಬರ್ 24, 2021
27 °C

ಜನಾಶೀರ್ವಾದ ಯಾತ್ರೆ: ಸಚಿವ ಭಗವಂತ ಖೂಬಾಗೆ ಭವ್ಯ ಸ್ವಾಗತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani Photo

ರಾಯಚೂರು: ನಗರದಲ್ಲಿ ಬಿಜೆಪಿಯಿಂದ ಜನಾಶೀರ್ವಾದ ಯಾತ್ರೆ ಆರಂಭಿಸಲಾಗಿದ್ದು, ಗಂಜ್‌ ವೃತ್ತದಲ್ಲಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಭಗವಂತ ಖೂಬಾ ಅವರನ್ನು ಕಾರ್ಯಕರ್ತರು ಭವ್ಯವಾಗಿ ಸ್ವಾಗತಿಸಿದರು.

ತೆರೆದ ವಾಹನದಲ್ಲಿ ಮೆರವಣಿಗೆ ನಡೆಯುತ್ತಿದ್ದು, ನೂರಾರು ಕಾರ್ಯಕರ್ತರು ನೆರೆದಿದ್ದಾರೆ. ಪುಷ್ಪವೃಷ್ಟಿ ಮಾಡುವುದರ ಜೊತೆಗೆ ಘೋಷಣೆಗಳನ್ನು ಕೂಗುತ್ತಿದ್ದಾರೆ. ಬೈಕ್‌ ರ‍್ಯಾಲಿ ಕೂಡಾ ಆಯೋಜಿಸಲಾಗಿದೆ.

ಕೋವಿಡ್‌ ನಿಯಮ ಉಲ್ಲಂಘನೆ ಮಾಡಲಾಗಿದೆ. ನಗರದ ವಿವಿಧಿ ಮಹನೀಯರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದ ನಂತರ, ವೀರಶೈವ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ ಸಮಾರಂಭದಲ್ಲಿ ಮಾತನಾಡಲಿದ್ದಾರೆ.

ರಾಯಚೂರು ನಗರಕ್ಕೆ ತಲುಪುವ ಪೂರ್ವ ಯಾದಗಿರಿ ಮಾರ್ಗದಿಂದ ಶಕ್ತಿನಗರ ತಲುಪಿದ ಸಚಿವ ಭಗವಂತ ಖೂಬಾ ಅವರನ್ನು, ಕ್ರೇನ್‌ ನೆರವಿನಿಂದ 100 ಕೆಜಿ ತೂಕದ ಸೇಬಿನ ಹಣ್ಣಿನ ಹಾರದಿಂದ ಸ್ವಾಗತಿಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು